ಬೆಂಗಳೂರು: ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಅವರ ಮದುವೆ ಇಂದು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ಮದುವೆಗೆ ರಾಜಕೀಯ ಹಾಗೂ ಸಿನಿಮಾ ಸ್ನೇಹಿತರನ್ನು ಧನಂಜಯ್ ಅವರು ಆಹ್ವಾನಿಸಿದ್ದಾರೆ.
ವಿಶೇಷ ಏನೆಂದರೆ ಟಾಲಿವುಡ್‌ನ ಖ್ಯಾತ ಸಿನಿಮಾ ಬರಹಗಾರ, ಪುಪ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದಾರೆ.
ಸುಕುಮಾರ್ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಧನಂಜಯ್ ಭೇಟಿಯಾಗಿದ್ದಾರೆ. ನಾಳೆ ನಡೆಯುವ ಆರತಕ್ಷತೆ ಕಾರ್ಯಕ್ರಮದಲ್ಲಿ ಸುಕುಮಾರ್ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಪುಪ್ಪ 1, ಪುಪ್ಪ 2 ಸಿನಿಮಾದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.