Publish Date: Thu, 17 Mar 2022 (09:20 IST)
Updated Date: Thu, 17 Mar 2022 (09:37 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮತ್ತು ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆದ ಹಿನ್ನಲೆಯಲ್ಲಿ ಇಂದು ಅಪ್ಪು ಪತ್ನಿ ಅಶ್ವಿನಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬೆಳಿಗ್ಗೆಯೇ ಪತಿ ಸಮಾಧಿಗೆ ಭೇಟಿ ನೀಡಿದ ಅಶ್ವಿನಿ ನಮನ ಸಲ್ಲಿಸಿದರು. ಬಳಿಕ ಡಾ.ರಾಜ್, ಪಾರ್ವತಮ್ಮನವರ ಸಮಾಧಿಗೂ ಭೇಟಿ ನೀಡಿ ನಮಸ್ಕರಿಸಿದರು.
ಪುನೀತ್ ಹುಟ್ಟಹಬ್ಬ ಹಿನ್ನಲೆಯಲ್ಲಿ ನಿನ್ನೆಯೇ ಅವರ ಸಮಾಧಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಧ‍್ಯರಾತ್ರಿ ಪುನೀತ್ ಜನ್ಮದಿನ ಅಂಗವಾಗಿ ರಾಘಣ್ಣ ಕೇಕ್ ಕಟ್ ಮಾಡಿ ಸಿಹಿ ವಿತರಿಸಿದ್ದರು.