Select Your Language

Notifications

webdunia
webdunia
webdunia
Monday, 7 April 2025
webdunia

ಅಪ್ಪು ಹಳೆಯ ಬರ್ತ್ ಡೇ ವಿಡಿಯೋ ಹಾಕಿ ಅಭಿಮಾನಿಗಳಿಂದ ಹುಟ್ಟುಹಬ್ಬದ ಆಚರಣೆ

ಪುನೀತ್ ರಾಜ್ ಕುಮಾರ್
ಬೆಂಗಳೂರು , ಗುರುವಾರ, 17 ಮಾರ್ಚ್ 2022 (08:40 IST)
ಬೆಂಗಳೂರು: ಎಂದಿನಂತೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಿಲ್ಲ, ಪೋಸ್ಟರ್ ರಿಲೀಸ್ ಇಲ್ಲ.. ಜೇಮ್ಸ್ ಸಿನಿಮಾ ರಿಲೀಸ್ ಆದರೂ ಎಂದಿನ ಸಂಭ್ರಮವಿಲ್ಲ. ಬದಲಿಗೆ ಕೊನೆಯ ಸಿನಿಮಾ ಎಂಬ ಬೇಸರ. ತಮ್ಮ ನೆಚ್ಚಿನ ನಟನಿಲ್ಲದೇ ಪುನೀತ್ ಅಭಿಮಾನಿಗಳು ಇಂದು ಅವರ ಹುಟ್ಟುಹಬ್ಬವನ್ನು ಬೇಸರದಿಂದಲೇ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಹಿಂದೆ ಹುಟ್ಟುಹಬ್ಬದ ದಿನ ನೀಡಿದ ಸಂದೇಶ, ಕೇಕ್ ಕಟ್ ಮಾಡಿದ ವಿಡಿಯೋಗಳನ್ನು ಪ್ರಕಟಿಸಿ ಅಭಿಮಾನಿಗಳು ಅವರನ್ನು ಈ ದಿನ ಜೀವಂತವಾಗಿಟ್ಟಿದ್ದಾರೆ.

ಇನ್ನು, ಕೆಲವರು ಅಪ್ಪು ಹೆಸರಲ್ಲಿ ಇಂದು ನೇತ್ರದಾನ, ರಕ್ತದಾನ, ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಂಡಿದ್ದಾರೆ.  ಅಪ್ಪು ಇಲ್ಲದೇ ಹೋದರೂ ಅವರ ಆದರ್ಶಗಳು, ನಗುಮುಖವನ್ನು ಸದಾ ಜೀವಂತವಾಗಿಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಾಪ್ ರೆಡ್ಡಿಯಾದ ದುನಿಯಾ ವಿಜಯ್