Select Your Language

Notifications

webdunia
webdunia
webdunia
webdunia

ತನ್ನೆದುರೇ ಪೈರಸಿಗೆ ಕುಮ್ಮಕ್ಕು ಕೊಟ್ಟ ಅಭಿಮಾನಿಗೆ ಮಿಲನಾ ನಾಗರಾಜ್ ಕ್ಲಾಸ್

ತನ್ನೆದುರೇ ಪೈರಸಿಗೆ ಕುಮ್ಮಕ್ಕು ಕೊಟ್ಟ ಅಭಿಮಾನಿಗೆ ಮಿಲನಾ ನಾಗರಾಜ್ ಕ್ಲಾಸ್
ಬೆಂಗಳೂರು , ಗುರುವಾರ, 17 ಮಾರ್ಚ್ 2022 (09:00 IST)
ಬೆಂಗಳೂರು: ಇತ್ತೀಚೆಗೆ ಎಷ್ಟೇ ಕಠಿಣ ನಿಯಮ, ಕ್ರಮ ಕೈಗೊಂಡರೂ ಹೊಸ ಸಿನಿಮಾಗಳು ಆನ್ ಲೈನ್ ಮೂಲಕ ಸೋರಿಕೆಯಾಗುವುದು ತಪ್ಪುವುದಿಲ್ಲ. ಇದೀಗ ನಟಿ ಮಿಲನಾ ನಾಗರಾಜ್ ತಮ್ಮ ಮುಂದೆಯೇ ಪೈರಸಿಗೆ ಕುಮ್ಮಕ್ಕು ಕೊಟ್ಟ ಅಭಿಮಾನಿಗೆ ಬೆವರಿಳಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿರ್ಮಿಸಿ, ಅಭಿನಯಿಸಿದ್ದ ಲವ್ ಮಾಕ್ಟೇಲ್ 2 ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಇದೀಗ ಒಟಿಟಿಯಲ್ಲೂ ಲಭ್ಯವಿದೆ. ಈ ಸಿನಿಮಾ ಬಗ್ಗೆ ಮಿಲನಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗೆ ಅಭಿಮಾನಿಯೊಬ್ಬರು ನಾನು ಅಮೆರಿಕಾದಲ್ಲಿದ್ದು, ಈ ಸಿನಿಮಾ ನೋಡಲಾಗುತ್ತಿಲ್ಲ ಎಂದಿದ್ದರು.

ಇದಕ್ಕೆ ಇನ್ನೊಬ್ಬ ಅಭಿಮಾನಿ ಪ್ರತಿಕ್ರಿಯಿಸಿ, ನೀವು ಟೆಲಿಗ್ರಾಂನಲ್ಲಿದ್ದೀರಾ? ನಿಮ್ಮ ನಂಬರ್ ಕೊಡಿ ನಾನು ಲಿಂಕ್ ಕಳುಹಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಇನ್ನಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಇವರಿಗೆಲ್ಲಾ ಮಿಲನಾ ತಕ್ಕ ಉತ್ತರ ನೀಡಿದ್ದು, ‘ನಿಮ್ಮಂತಹವರೇ ಪೈರಸಿಗೆ ಪ್ರೋತ್ಸಾಹ ಕೊಟ್ಟರೆ ಹೇಗೆ? ಪೈರೇಟ್ ಕಾಪಿ ವೀಕ್ಷಿಸಿದರೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ತೊಂದರೆಯಾಗುತ್ತದೆ. ಪೈರಸಿ ನಿಲ್ಲಿಸಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಫಸ್ಟ್ ಶೋ ವೀಕ್ಷಿಸಿದ ಅಪ್ಪು ಪುತ್ರಿ, ದೊಡ್ಮನೆ ಕುಟುಂಬ