Daily Horoscope
✕

ಬರ್ತ್ ಡೇ ದಿನ ಮನೆ ಹತ್ರ ಬರ್ಬೇಡಿ ಎಂದ ಪುನೀತ್ ರಾಜ್ ಕುಮಾರ್! ಅಭಿಮಾನಿಗಳಿಗೆ ಶಾಕ್!

Webdunia
ಶನಿವಾರ, 16 ಮಾರ್ಚ್ 2019 (09:11 IST)
ಬೆಂಗಳೂರು: ಸ್ಟಾರ್ ನಟರ ಬರ್ತ್ ಡೇ ಎಂದರೆ ಅಭಿಮಾನಿಗಳು ತಮ್ಮದೇ ಮನೆ ಮಗನ ಹುಟ್ಟುಹಬ್ಬವೆನ್ನುವಂತೆ ಮನೆ ಮುಂದೆ ಜಮಾಯಿಸುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾರ್ಚ್ 17 ರಂದು ತಮ್ಮ ಬರ್ತ್ ಡೇಗೂ ಮೊದಲು ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.


ಈ ಬಾರಿ ತಮ್ಮ ಹುಟ್ಟುಹಬ್ಬದ ದಿನ ಮಧ್ಯರಾತ್ರಿಯೇ ಮನೆ ಮುಂದೆ ಯಾರೂ ಬರಬೇಡಿ ಎಂದು ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ. ಯಾಕೆಂದರೆ ಮಾರ್ಚ್ 16 ರಂದು ರಾತ್ರಿ ನಾನು ಮನೆಯಲ್ಲಿ ಇರಲ್ಲ. ಹೀಗಾಗಿ ಮನೆಗೆ ಬಂದು ನಿರಾಶೆ ಅನುಭವಿಸುವುದು ಬೇಡ ಎಂದು ಪುನೀತ್ ಮೊದಲೇ ಮನವಿ ಮಾಡಿದ್ದಾರೆ.

ಆದರೆ ಮಾರ್ಚ್ 17 ರಂದು ಬೆಳಿಗ್ಗೆ ನಾನು ಮನೆಯಲ್ಲಿರುತ್ತೇನೆ. ಒಂದು ವೇಳೆ ಯಾರೇ ಮನೆಗೆ ಬಂದು ನನಗೆ ವಿಶ್ ಮಾಡಬೇಕು ಎಂದಿದ್ದರೂ ಹಾರ, ತುರಾಯಿ, ಕೇಕ್ ಎಲ್ಲಾ ತರಬೇಡಿ. ನಿಮ್ಮ ಆಗಮನವೇ ನನಗೆ ದೊಡ್ಡ ಉಡುಗೊರೆ. ಹಾರ, ಕೇಕ್ ಕೆಲವೊಮ್ಮೆ ನನಗೆ ಸರಿಯಾಗಿ ಕಟ್ ಮಾಡಕ್ಕಾಗಲ್ಲ, ಅದರಿಂದ ನಿಮಗೆ ಬೇಸರವಾಗುತ್ತದೆ.

ಅಲ್ಲದೆ, ಕೇಕ್, ಹಾರಕ್ಕೆ ನೀವು ನಿಮ್ಮ ಹಣ ಖರ್ಚು ಮಾಡುತ್ತೀರಿ. ಅದರ ಬದಲು ಆ ಹಣವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿ. ನಮ್ಮ ಕುಟುಂಬದ ಮೇಲೆ, ಚಿತ್ರರಂಗದ ಮೇಲೆ ನಿಮ್ಮ ಆಶೀರ್ವಾದ ಸದಾ ಹೀಗೇ ಇರಲಿ ಎಂದು ಪುನೀತ್ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಉತ್ತಮ ಪಡೆದರೂ ತಾಂಡವ್ ರಾಮ್ ಗೆ ಇಂದು ಕ್ಲಾಸ್ ಗ್ಯಾರಂಟಿನಾ

ರಾಮಾಯಣ ಪಾರ್ಟ್ 1 ಡೇ 1 ಕಲೆಕ್ಷನ್:ರಣ್‌ಬೀರ್, ಸಾಯಿ ಪಲ್ಲವಿ ಅಭಿನಯಕ್ಕೆ ಪ್ರೇಕ್ಷಕರ ತೀರ್ಪು ಏನು

BBK13: ಗಗನ್ ಈಗ ನೈಸ್ ಮಾಡ್ಕೊಂಡು ಬರ್ತಿದ್ದಾನೆ ಮಗಾ.. ತಾಂಡವ್ ಮಾತಿಗೆ ವೀಕ್ಷಕರ ಆಕ್ರೋಶ: ಆದ್ರೆ ರಿಯಾಲಿಟಿ ಏನೆಂದು ಹೇಳಿದ ಪ್ರಶಾಂತ್ Video

ರಾವಣ ಯಶ್ ಮುಂದೆ ರಾಮ ರಣಬೀರ್ ಡಲ್ ಹೊಡೆದ್ರಾ.. ರಾಮಾಯಣ ಸಿನಿಮಾ ಫಸ್ಟ್ ಡೇ ನೋಡಿ ಫ್ಯಾನ್ಸ್ ರಿಯಾಕ್ಷನ್ ಏನು Video

ವಿಜಯಲಕ್ಷ್ಮಿ ದರ್ಶನ್ ಮನೆಗೆ ಆಟೋ ಬುಕ್ ಮಾಡಿ ಬೆದರಿಕೆ, ಧನ್ವೀರ್ ಗೌಡ ವಿರುದ್ಧ ಸಂಚಲನ ಮೂಡಿಸಿದ ಹೊಸ ಆರೋಪ

ಮುಂದಿನ ಸುದ್ದಿ
Show comments