Publish Date: Mon, 18 Apr 2022 (08:10 IST)
Updated Date: Mon, 18 Apr 2022 (08:31 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ವಿತ ಸಿನಿಮಾದಲ್ಲಿ ಸೂಪರ್ ಕಾಪ್ ಆಗಿ ಮಿಂಚಬೇಕಿತ್ತು.
ಇದೀಗ ದ್ವಿತ ಸಿನಿಮಾಗಾಗಿ ಅವರ ಲುಕ್ ಟೆಸ್ಟ್ ನಡೆದ ವೇಳೆ ತೆಗೆದಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯ ಹೇರ್ ಕಟ್ ಮತ್ತು ಮೀಸೆ ಮಾಡಿಕೊಂಡು ಫೋಟೋ ತೆಗೆಸಿಕೊಂಡಿದ್ದ ಅಪ್ಪು ಫೋಟೋಗಳನ್ನು ನೋಡಿ ಅಭಿಮಾನಿಗಳು ಇನ್ನೀಗ ಇದು ಕನಸು ಮಾತ್ರ ಎಂದು ಬೇಸರಿಸಿಕೊಂಡಿದ್ದಾರೆ.