Publish Date: Mon, 18 Apr 2022 (06:50 IST)
Updated Date: Mon, 18 Apr 2022 (07:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ನಲ್ಲಿ ಅವರದ್ದೇ ಧ್ವನಿ ಕೇಳಲು ಸಾಧ‍್ಯವಾಗಲಿಲ್ಲ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಜೇಮ್ಸ್ ತಂಡ ಗುಡ್ ನ್ಯೂಸ್ ಕೊಟ್ಟಿದೆ.
ಆಧುನಿಕ ವಾಯ್ಸ್ ಮಿಕ್ಸಿಂಗ್ ತಂತ್ರಜ್ಞಾನ ಬಳಸಿ ಜೇಮ್ಸ್ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಏಪ್ರಿಲ್ 22 ರಿಂದ ಹೊಸ ರೂಪದಲ್ಲಿ ಅಪ್ಪು ಧ್ವನಿಯಲ್ಲೇ ಜೇಮ್ಸ್ ಹೊಸದಾಗಿ ಬಿಡುಗಡೆಯಾಗಲಿದೆ.
ಇಂತಹದ್ದೊಂದು ತಂತ್ರಜ್ಞಾನ ವಿಶ್ವದಲ್ಲೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗುತ್ತಿದೆ. ಜೇಮ್ಸ್ ಬಿಡುಗಡೆ ಸಂದರ್ಭದಲ್ಲಿ ಇನ್ನೂ ಈ ತಂತ್ರಜ್ಞಾನ ರಿಸರ್ಚ್ ಹಂತದಲ್ಲಿತ್ತು. ಆದರೆ ಈಗ ಈ ತಜ್ಞರ ತಂಡ ಪ್ರಭಾಸ್ ಅಭಿನಯದ ಆದಿ ಪುರುಷ್ ಸಿನಿಮಾಗಾಗಿ ಕೆಲಸ ಮಾಡುತ್ತಿದೆ. ಆದರೆ ಪುನೀತ್ ಗಾಗಿ ಆದಿ ಪುರುಷ್ ಸಿನಿಮಾವನ್ನು ಅರ್ಧಕ್ಕೇ ಬಿಟ್ಟು ಜೇಮ್ಸ್ ಗಾಗಿ ಕೆಲಸ ಮಾಡಿದೆ. ಚಿತ್ರತಂಡದ ಈ ಹೊಸ ಪ್ರಯತ್ನದಿಂದ ಪುನೀತ್ ಕುಟುಂಬಸ್ಥರೂ ಖುಷಿಯಾಗಿದ್ದಾರಂತೆ.