Publish Date: Wed, 03 Feb 2021 (10:47 IST)
Updated Date: Wed, 03 Feb 2021 (10:49 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ಯಾವತ್ತೂ ನಿರಾಸೆ ಮಾಡಲ್ಲ. ಅದರಲ್ಲೂ ಪುಟಾಣಿ ಅಭಿಮಾನಿಗಳಿಗಂತೂ ಅವರು ಅಚ್ಚು ಮೆಚ್ಚಿನ ಸ್ಟಾರ್.
ಇಂತಿಪ್ಪ ಪವರ್ ಸ್ಟಾರ್ ತಮ್ಮನ್ನು ಭೇಟಿ ಮಾಡಲು ಬಂದ ಮಕ್ಕಳ ಗುಂಪಿನೊಂದಿಗೆ ತಾವೂ ಮಗುವಾಗಿ ಡ್ಯಾನ್ಸ್ ಮಾಡಿದ್ದಾರೆ. ಯುವರತ್ನ ಸಿನಿಮಾದ ಹಿಟ್ ಹಾಡು ಪವರ್ ಆಫ್ ಯೂಥ್ ಹಾಡನ್ನು ತಾವೇ ಬಾಯಲ್ಲಿ ಗುನುಗುತ್ತಾ ಆ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿದ ಅಪ್ಪು ಬಳಿಕ ಹೈಫೈ ಕೊಟ್ಟು ಅವರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.