Publish Date: Wed, 03 Feb 2021 (09:55 IST)
Updated Date: Wed, 03 Feb 2021 (09:58 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ರೊಮ್ಯಾಂಟಿಕ್ ಸಿನಿಮಾ ದಿಯಾ ಈಗ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಈ ಸಿನಿಮಾದ ಹಾಡೊಂದನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದಾಗ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದರಿಂದ ಸ್ಪೂರ್ತಿಗೊಂಡಿರುವ ಚಿತ್ರತಂಡ ತೆಲುಗಿನಲ್ಲೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಸದ್ಯದಲ್ಲೇ ಡೇಟ್ ಅನೌನ್ಸ್ ಮಾಡಲಿದೆ. ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ರವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಇದಾಗಿದೆ.