Select Your Language

Notifications

webdunia
webdunia
webdunia
webdunia

ಈ ಶೋನಿಂದ ಹೊರ ಹೋಗಿ ಸಾರ್..! ವಿಜಯ್ ಸೂರ್ಯಗೆ ಫ್ಯಾನ್ಸ್ ಹೀಗ್ಯಾಕೆ ಹೇಳ್ತಿದ್ದಾರೆ?

ವಿಜಯ್ ಸೂರ್ಯ
ಬೆಂಗಳೂರು: ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟ ಡಿಂಪಲ್ ಸ್ಟಾರ್ ವಿಜಯ್ ಸೂರ್ಯ ಮೇಲೆ ಈಗ  ವೀಕ್ಷಕರಿಗೆ ಬೇಸರವಾಗಿದೆ. ಹೀಗಾಗಿ ಅವರು ಮಾಡುತ್ತಿರುವ ಶೋನಿಂದ ಹೊರಹೋಗಿ ಎಂದು ಅಭಿಮಾನಿಗಳೇ ದಂಬಾಲು ಬಿದ್ದಿದ್ದಾರೆ!


ಆದರೆ ಇದೆಲ್ಲಾ ಅವರ ಮೇಲಿನ ಪ್ರೀತಿಯಿಂದ ಅಷ್ಟೇ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ವಿಜಯ್ ಸೂರ್ಯ ಹಾಗೂ ಹಿರಿಯ ನಟಿ ಸುಧಾರಾಣಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಆದರೆ ಈಗ ನಾಯಕಿ ಅನು ಸಿರಿಮನೆ ಮದುವೆಯಾಗುವ ಹುಡುಗನಾಗಿ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿರುವುದು ಜೊತೆ ಜೊತೆಯಲಿ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಆರ್ಯವರ್ಧನ್-ಅನು ಮದುವೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿರುವುದು ಇಷ್ಟವಾಗಿಲ್ಲ. ಹೀಗಾಗಿ ನೀವು ಈ ಶೋನಿಂದ ಹೊರಹೋಗಿ. ಬೇಕಿದ್ದರೆ ಬೇರೆ ಸೀರಿಯಲ್ ಮಾಡಿ. ನೋಡ್ತೀವಿ. ಆದರೆ ಈ ಸೀರಿಯಲ್ ನಲ್ಲಿ ನಾಯಕ-ನಾಯಕಿಯನ್ನು ದೂರ ಮಾಡುವ  ಕೆಲಸ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಸೂರ್ಯಗೆ ಅಭಿಮಾನಿಗಳು ಪ್ರೀತಿಯಿಂದಲೇ ಧಮ್ಕಿ ಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಸಿನಿಮಾ ನಿದ್ದೆಗೆಡಿಸಿರುವುದು ಈ ಮೂರು ಕನ್ನಡ ಸಿನಿಮಾಗಳು