ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವರ್ಕೌಟ್, ಫಿಟ್ನೆಸ್ ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂದು ಎಲ್ಲರಿಗೂ ಗೊತ್ತು. ಇದೀಗ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಪುನೀತ್ ಸೈಕಲಿಂಗ್ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.
ಬೆಳಗ್ಗಿನ ಜಾವದಲ್ಲಿ ಬೆಂಗಳೂರಿನ ರೋಡ್ ನಲ್ಲಿ ಮುಖಕ್ಕೆ ಮಾಸ್ಕ್ ತೊಟ್ಟುಕೊಂಡು ಸೈಕಲ್ ರೈಡಿಂಗ್ ಮಾಡುವ ವಿಡಿಯೋವನ್ನು ಪುನೀತ್ ಪ್ರಕಟಿಸಿದ್ದಾರೆ. ಈ ಮೂಲಕ ಪರಿಸರ ಸ್ನೇಹಿ ಸೈಕಲ್ ರೈಡಿಂಗ್ ಮಾಡುವವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ತಮ್ಮ ಫಿಟ್ನೆಸ್ ಗೂ ಇದು ಉತ್ತಮ ಎಂದು ಸಂದೇಶ ನೀಡಿದ್ದಾರೆ.