Select Your Language

Notifications

webdunia
webdunia
webdunia
webdunia

ಫೀಲಂ ಛೇಂಬರ್ ಮುಂದೆ ನಿರ್ಮಾಪಕರ ಧರಣಿ

Producers' sit-in in front of Jatapati-Phelum Chamber continued between Kiccha Sudeep and Producers
bangalore , ಸೋಮವಾರ, 17 ಜುಲೈ 2023 (16:00 IST)
ಸುದೀಪ್  ಮತ್ತು ನಿರ್ಮಾಪಕರ ನಡುವೆ ಮುಂದುವರೆದ ಜಟಾಪಟಿ ಇದೀಗ ನ್ಯಾಯಾಲಯದ ಮೆಟ್ಟಿಲು ಕಿಚ್ಚ ಸುದೀಪ್ ಹೇರಿದ್ದಾರೆ.ಹೀಗಾಗಿ ಫಿಲ್ಮ್ ಚೆಂಬರ್ ಮುಂದೆ ನಿರ್ಮಾಪಕರಿಂದ ಪ್ರತಿಭಟನೆ ನಡೆಸಲಾಗಿದೆ.
 
ಈ ವೇಳೆ ಮಾತನಾಡಿದ ನಿರ್ಮಾಪಕ ಕುಮಾರ್  ಎಲ್ಲರಿಗೂ ಗೊತ್ತು ನಂಗೆ ಆಗಿರುವ ಸಮಸ್ಯೆ.ಚಿತ್ರರಂಗಕ್ಕೆ ಒಂದು ಮನೆ ಇದ್ದಂತೆ  ಫಿಲ್ಮ್ ಚೆಂಬರ್.ಹೀಗಾಗಿ‌ ಇಲ್ಲಿನೇ ಬಗೆಹರಿಸಿಕೊಳ್ಳಲು ಬಂದಿದ್ದೇನೆ. ಸುದೀಪದ ಅವರ ಬಗ್ಗೆ ಎಲ್ಲಿಯೂ ಕೆಟ್ಟದಾಗಿ‌ ಮಾತನಾಡಿಲ್ಲ.ನಮಗೆ ಸರಿಯಾದ ಸ್ಪಂದನೆ‌ ಸಿಗುತ್ತಿಲ್ಲ ಎಂಬುದಷ್ಟೇ ಹೇಳಿದ್ದೀನಿ.ವಾಣಿಜ್ಯ ಮಂಡಳಿಯಲ್ಲಿ ಬಗೆ ಹರಿಸಿಕೊಳ್ಳಬೇಕಿ ಎಂಬುದೇ ನನ್ನ ಉದ್ದೇಶ.ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಕುಳಿತುಕೊಳ್ಳುತ್ತೇನೆ.ನಾನು ಯಾರ ಸಹಾಯವನ್ನು ಕೇಳಿಲ್ಲ.ನಮದು ಏನಿದೆ ಅದನ್ನ ಕ್ಲಿಯರ್ ಮಾಡಿದ್ರೆ ಸಾಕು.ನಾವೂ ನಿರ್ಮಾಪಕರು, ಸಾಕಷ್ಟು‌ ಜನರನ್ನು ಬೆಳೆಸಿದ್ದೀವಿ
 
ಸಭೆಗೆ ಬರಲಿ, ಸಭೆಯ ಮುಂದೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ.ಯಾರಿಗೂ ಅಗೌರವ ಆಗಬಾರದು, ಗೌರವ ಉಳಿಯಬೇಕು.ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು.ಮಾಧ್ಯಮದವರ ಮುಂದೆಯೇ ಕೇಳಬೇಕು.ದಾಖಲೆಗಳು ಖಂಡಿತ ಇದೆ ಕೊಡ್ತೀನಿ.ರಾಜಿ ಸಂಧಾನದ ಬಗ್ಗೆ ನಾವೂ ತಯಾರಿದ್ದೀವಿ.ಅವರು ಕರೆಯಬೇಕು, ಆದರೆ ನಾವೇ ಕರೆಯುತ್ತೀದ್ದೀವಿ ಅಂತಾ ಕುಮಾರ್ ಹೇಳಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ಸ್ಲಿಮ್ ಆಗಿರುವ ರಮ್ಯಾ ಲೇಟೆಸ್ಟ್ ವಿಡಿಯೋ ವೈರಲ್