Select Your Language

Notifications

webdunia
webdunia
webdunia
webdunia

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಮದಕರಿನಾಯಕ! ನಾಯಕಿ ಫೈನಲ್ ಆಗಿಲ್ಲ ಎಂದ ರಾಕ್ ಲೈನ್ ವೆಂಕಟೇಶ್

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಮದಕರಿನಾಯಕ! ನಾಯಕಿ ಫೈನಲ್ ಆಗಿಲ್ಲ ಎಂದ ರಾಕ್ ಲೈನ್ ವೆಂಕಟೇಶ್
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (09:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಲಿರುವ ಐತಿಹಾಸಿಕ ಸಿನಿಮಾ ಮದಕರಿನಾಯಕ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.


ನಮ್ಮ ಕನ್ನಡದ ವೀರ ಮದಕರಿನಾಯಕನನ್ನು ದೇಶಕ್ಕೇ ತೋರಿಸೋಣ ಎಂದು ಬಹುಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ. ಆದರೆ ಸಿನಿಮಾ ನಾಯಕಿ ಯಾರು ಎಂದು ಇನ್ನೂ ಫೈನಲ್ ಆಗಿಲ್ಲ ಎಂದು ರಾಕ್ ಲೈನ್ ಹೇಳಿದ್ದಾರೆ.

ಇನ್ನು, ಬಿಎಲ್ ವೇಣು ಅವರ ಕಾದಂಬರಿ ಆಧಾರಿತ ಸಿನಿಮಾ ಇದು. ಇದನ್ನು ಮತ್ತೆ ನಮ್ಮ ಇಡೀ ತಂಡ ಕೂತು ಸಿನಿಮಾಗೆ ತಕ್ಕ ಹಾಗೆ ಮಾಡಿಕೊಂಡಿದ್ದೇವೆ. ಈ ಸಿನಿಮಾದಲ್ಲಿ ಸುಮಲತಾ ಅಂಬರೀಶ್‍ ರಾಜಮಾತೆ ಪಾತ್ರ ಮಾಡುತ್ತಿದ್ದಾರೆ. ಅದೊಂದು ಪವರ್ ಫುಲ್ ಕ್ಯಾರೆಕ್ಟರ್. ಹಾಗಾಗಿ ಎಷ್ಟೇ ಬ್ಯುಸಿ ಇದ್ದರೂ ಅವರೇ ಮಾಡಬೇಕೆಂದು ಮನವಿ ಮಾಡಿದ್ದೇವೆ. ಹೀಗಾಗಿ ಒಪ್ಪಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾ. ಹಾಗಾಗಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯಾವಾಗ ಚಿತ್ರ ಮುಗಿಯುತ್ತದೆ ಎಂದು ಈಗಲೇ ಹೇಳಲು ಸಾಧ‍್ಯವಿಲ್ಲ ಎಂದು ರಾಕ್ ಲೈನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ನನ್ನ ದತ್ತು ಮಗನಲ್ಲ! ಮದಕರಿನಾಯಕನ ಬಗ್ಗೆ ಸುಮಲತಾ ನೀಡಿದ ಸರ್ಪ್ರೈಸ್