Select Your Language

Notifications

webdunia
webdunia
webdunia
webdunia

ದರ್ಶನ್ ನನ್ನ ದತ್ತು ಮಗನಲ್ಲ! ಮದಕರಿನಾಯಕನ ಬಗ್ಗೆ ಸುಮಲತಾ ನೀಡಿದ ಸರ್ಪ್ರೈಸ್

ದರ್ಶನ್ ನನ್ನ ದತ್ತು ಮಗನಲ್ಲ! ಮದಕರಿನಾಯಕನ ಬಗ್ಗೆ ಸುಮಲತಾ ನೀಡಿದ ಸರ್ಪ್ರೈಸ್
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (09:08 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿನಾಯಕ ಸಿನಿಮಾಗೆ ನಿನ್ನೆ ಮುಹೂರ್ತ ನೆರವೇರಿದ್ದು, ಈ ವೇಳೆ ಸುಮಲತಾ ಅಂಬರೀಶ್ ಕೂಡಾ ತಮ್ಮ ಮನೆ ಮಗ ಎಂದು ಕರೆಯುವ ದರ್ಶನ್ ಗೆ ಸಾಥ್ ನೀಡಿದ್ದರು.


ಈ ವೇಳೆ ಮಾಧ್ಯಮಗಳು ನಿಮ್ಮ ದತ್ತು ಮಗ ಒಂದು ಐತಿಹಾಸಿಕ ಸಿನಿಮಾ ಮಾಡ್ತಿದ್ದಾರೆ ಇದರ ಬಗ್ಗೆ ಹೇಳಿ ಎಂದಾಗ ಸುಮಲತಾ ದರ್ಶನ್ ನನ್ನ ದತ್ತು ಮಗ ಅಲ್ಲ. ಅವನು ನನ್ನ ಮಗನೇ ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ ತಾವು ರಾಜಮಾತೆ ಪಾತ್ರ ಮಾಡುತ್ತಿರುವ ಬಗ್ಗೆ ಸುಮಲತಾ ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ದರ್ಶನ್ ಗೆ ರಾಜಮಾತೆಯ ಪಾತ್ರ ಮಾಡುತ್ತಿರುವ ಬಗ್ಗೆ ಹೆಚ್ಚಿನ ವಿವರವನ್ನು ಈಗಲೇ ನಾನು ಹೇಳಲ್ಲ. ಅದರ ಬಗ್ಗೆ ನಿರ್ದೇಶಕರು, ನಿರ್ಮಾಪಕರೇ ಹೇಳುತ್ತಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಹೋಗುವವರು ಯಾರು?