ಹೈದರಾಬಾದ್: ರಾಧೇ ಶ್ಯಾಮ್ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿರುವ ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಎಲ್ಲವೂ ಸರಿಯಿಲ್ಲವೇ? ಇಂತಹದ್ದೊಂದು ರೂಮರ್ ಹರಿದಾಡುತ್ತಿದ್ದು, ಇದಕ್ಕೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಪೂಜಾ ಹೆಗ್ಡೆಯ ವೃತ್ತಿಪರತೆ ಕೊರತೆ ಪ್ರಭಾಸ್ ಗೆ ಅಸಮಾಧಾನ ಮೂಡಿಸಿದೆ. ಈ ಕಾರಣಕ್ಕೆ ಇಬ್ಬರೂ ರಾಧೇ ಶ್ಯಾಮ್ ಸೆಟ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಈ ಬಗ್ಗೆ ರಾಧೇ ಶ್ಯಾಮ್ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ಈ ವರದಿಗಳೆಲ್ಲಾ ಸುಳ್ಳು. ಅವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ನಷ್ಟೇ ಆಫ್ ಸ್ಕ್ರೀನ್ ನಲ್ಲೂ ಚೆನ್ನಾಗಿದೆ. ಇಬ್ಬರೂ ಪರಸ್ಪರ ಗೌರವ ಹೊಂದಿದ್ದಾರೆ. ಇದೆಲ್ಲಾ ಕಪೋಲಕಲ್ಪಿತ ವರದಿಗಳು ಎಂದು ಯುವಿ ಕ್ರಿಯೇಷನ್ಸ್ ಸ್ಪಷ್ಟನೆ ನೀಡಿದೆ.