ಹೈದರಾಬಾದ್ : ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಎಲ್ಲರಿಗೂ ತಿಳಿದೆ ಇದೆ. ಕಣ್ಣು ಮಿಟುಕಾಯಿಸುವುದರ ಮೂಲಕ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಪ್ರಿಯಾ ಪ್ರಕಾಶ್ ವಾರಿಯರ್ ತೆಲುಗಿನ ಮತ್ತೊಂದು ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ನಟಿ ಪ್ರಿಯ ಪ್ರಕಾಶ್ ವಾರಿಯರ್ ನಟ ನಿತಿನ್ ಜೊತೆ ನಟಿಸುತ್ತಿದ್ದಾರೆ. ನಿರ್ದೆಶಕ ಚಂದ್ರಶೇಖರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೀಗ ನಟಿ ಪ್ರಿಯ ಯುವ ನಾಯಕ ತೇಜ ಸಜ್ಜಾ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಮತ್ತೊಂದು ಚಿತ್ರಕ್ಕೆ ಸಿಹಿ ಹಾಕಿದ್ದಾರೆ ಎನ್ನಲಾಗಿದೆ.
ಇದು ಮಲಯಾಳಂ ಹಿಟ್ ಚಿತ್ರ ಇಷ್ಕ್ ನ ತೆಲುಗು ರಿಮೇಕ್ ಆಗಿದೆ. ಈ ಚಿತ್ರವನ್ನು ನಾಗರಾಜ್ ನಿರ್ದೇಶಿಸುತ್ತಿದ್ದಾರೆ. ತೇಜ-ಪ್ರಿಯ ಪ್ರಕಾಶ್ ಜೋಡಿ ಕ್ರೇಜ್ ತರುವುದರಲ್ಲಿ ಯಾವುದೇ ಸಂದೇಶವಿಲ್ಲ ಎನ್ನಲಾಗಿದೆ.