Select Your Language

Notifications

webdunia
webdunia
webdunia
webdunia

ಶಾಸಕನಾಗುವ ಆಸೆಯನ್ನು ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್

ಶಾಸಕನಾಗುವ ಆಸೆಯನ್ನು ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್
ಬೆಂಗಳೂರು , ಶುಕ್ರವಾರ, 12 ಜನವರಿ 2018 (06:22 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವ ಸುದ್ದಿ ಆಗಾಗ ಕೇಳಿಬರುತ್ತಿದ್ದು, ಅದೇ ಸಾಲಿಗೆ ಈಗ ಒಳ್ಳೆ ಹುಡುಗ ಪ್ರಥಮ್ ಕೂಡ ಸೇರಿದ್ದಾರೆ.

 
ಇವರು ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಆ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಶಾಸಕನಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾನೂರನ್ನು ತಾಲೂಕಾಗಿ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿದ ಪ್ರಥಮ್ ಅವರು ‘ಹಾನೂರು ತಾಲೂಕಿಗೆ ನಾನು ಶಾಸಕನಾಗಬೇಕೆಂಬ ಆಸೆ ಇದೆ. ಅದಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಾನು ಕೋತಿ ನನ್ ಮಗ ಇರಬಹುದು, ಆದರೆ ಕಳ್ಳ್ ನನ್ ಮಗ ಅಲ್ಲ. ಹಾಗಾಗಿ ನಾನು ಒಬ್ಬ ಪರಿಪೂರ್ಣ, ಪ್ರಾಮಾಣಿಕ ವ್ಯಕ್ತಿಯಾಗಿ ಕೆಲಸಗಳನ್ನು ಮಾಡಬೇಕು. ರಾಜಕೀಯ ನನ್ನ ಇಷ್ಟದ ಕ್ಷೇತ್ರ, ಸಿನಿಮಾ ಅಲ್ಲ. ಸಿನಿಮಾಗೆ ನಾನು ನಿರ್ದೇಶಕನಾಗಲೂ ಬಂದೆ. ಆದರೆ ಈಗ ನಿರ್ದೇಶನಕ್ಕೆ ಅವಕಾಶ ಇಲ್ಲ’ ಎಂದು ಹೇಳಿದರು.

 
ಹಾಗೆ ಅವರನ್ನು ಕಾಂಗ್ರೆಸ್ ಪರ ನಿಲ್ಲುತ್ತಿದ್ದಿರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಅದಕ್ಕೆ ಅವರು ‘ ನಾನು ಸಿದ್ದರಾಮಯ್ಯ ಅವರಲ್ಲಿ ಟಿಕೆಟ್ ಕೇಳಲಿಲ್ಲ. ನಾನು ಯಾಕೆ ಟಕೆಟ್ ಕೇಳಲಿ. ಪಕ್ಷೇತರನಾಗಿಯೂ ನಿಲ್ಲಬಹುದಲ್ಲ ಅಥವಾ ಬೇರೆ ಪಕ್ಷದಿಂದಲೂ ಸ್ಪರ್ಧಿಸಬಹುದಲ್ಲವೇ’ ಎಂದು ಮರು ಪ್ರಶ್ನೆ ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರ ಜೀವನಕ್ಕೆ ಹೊಸ ತಿರುವು ನೀಡಿದವರು ಯಾರು ಗೊತ್ತಾ...?