Publish Date: Thu, 11 Jan 2018 (08:41 IST)
Updated Date: Thu, 11 Jan 2018 (08:43 IST)
ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಮುಂಬರುವ ಚುನಾವಣೆ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಈಗಾಗಲೇ ಸ್ಟಾರ್ ಪ್ರಚಾರಕರನ್ನು ಕರೆತರಲು ಯತ್ನ ನಡೆಸುತ್ತಿದ್ದಾರೆ. ಜೆಡಿಎಸ್ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಕರೆತರಲು ಪ್ರಯತ್ನಿಸಿದೆ.
ಕಾಂಗ್ರೆಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗಾಳ ಹಾಕುತ್ತಿದ್ದರೆ, ಬಿಜೆಪಿ ಕಿಚ್ಚ ಸುದೀಪ್ ರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮಗೆ ತೆಲುಗು ಚಿತ್ರರಂಗದಲ್ಲಿರುವ ಪ್ರಭಾವ ಬಳಸಿ ಪವನ್ ಕಲ್ಯಾಣ್ ರನ್ನು ರಾಜ್ಯದ ಪ್ರಚಾರಕ್ಕೆ ಕರೆತರಲು ಯೋಜನೆ ರೂಪಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎಂದು ಸ್ವತಃ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಆಂಧ್ರದಲ್ಲೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಪವನ್ ಕಲ್ಯಾಣ್ ಗೆ ರಾಜ್ಯದಲ್ಲೂ ಅಭಿಮಾನಿಗಳಿದ್ದಾರೆ. ಅದರ ಲಾಭ ಪಡೆಯಲು ಜೆಡಿಎಸ್ ಲೆಕ್ಕಾಚಾರ ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ