Select Your Language

Notifications

webdunia
webdunia
webdunia
webdunia

ರಾಜಕೀಯ ಬರುವ ಆಸೆ ವ್ಯಕ್ತಪಡಿಸಿದ ಪ್ರಕಾಶ ರೈ

ರಾಜಕೀಯ ಬರುವ ಆಸೆ ವ್ಯಕ್ತಪಡಿಸಿದ ಪ್ರಕಾಶ ರೈ
ಬೆಂಗಳೂರು , ಭಾನುವಾರ, 31 ಡಿಸೆಂಬರ್ 2017 (15:06 IST)
ಪದೇ ಪದೇ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರ್ತೇನೆ, ಅದೇನು ದೊಡ್ಡ ವಿಷಯವಲ್ಲ ಎನ್ನುವ ಮೂಲಕ ನಟ ಪ್ರಕಾಶ್‌ ರೈ  ಅವರು ರಾಜಕೀಯ ಪ್ರವೇಶದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
 
ಪ್ರಸ್‌ಕ್ಲಬ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ  ಮಾತನಾಡಿದ ಅವರು, ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಹೊಂದಿಲ್ಲ. ಆದರೆ ತುಂಬಾ ಒತ್ತಾಯ ಮಾಡಿದ್ರೆ ಬರಬಾರದೆಂದೇನು ಇಲ್ಲ, ಬರ್ತೀನಿ ಎಂದು ತಿಳಿಸಿದ್ದಾರೆ.
 
ಕಲಾವಿದನಾಗಿ ಸ್ಪಂದಿಸಲೇಬೇಕು, ಹೇಡಿಯಾಗಿ ಬಿಂಬಿಸಿಕೊಳ್ಳಬಾರದು, ಗೊತ್ತಿದ್ದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಚೋಪ್ರಾ ಕರಣ್ ಜೋಹರ್ ಕೆನ್ನೆಗೆ ಹೊಡೆದದ್ದು ಯಾಕೆ?