Publish Date: Sat, 30 Dec 2017 (11:29 IST)
Updated Date: Sat, 30 Dec 2017 (14:32 IST)
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಈಗ ಕಿರುಕುಳದ ಆರೋಪವೊಂದು ಕೇಳಿ ಬರುತ್ತಿದೆ. ಐಸ್ ಮಹಲ್ ಚಿತ್ರದ ನಟಿಗೆ ಪೋಷಕ ನಟ ರಾಜಶೇಖರ್ ಕಿರುಕುಳ ನೀಡಿದ್ದಾನೆ. ಈ ಕುರಿತು ನಟಿ ದೂರು ದಾಖಲಿಸಿದ್ದಾಳೆ.
ತೆರೆಯ ಮೇಲೆ ತಂದೆ ಪಾತ್ರ ಮಾಡಿರುವ ಪೋಷಕ ನಟ ರಾಜಶೇಖರ ಪರದೆಯ ಹಿಂದೆ ಕಾಮುಕನಂತೆ ಅಸಭ್ಯವಾದ ಸಂದೇಶಗಳನ್ನು ನಟಿಗೆ ಕಳುಹಿಸಿದ್ದಾನೆ.
ಕನ್ಯತ್ವ ಪರೀಕ್ಷೆ ಮಾಡಿಸು ಎಂಬಿತ್ಯಾದಿ ಸಂದೇಶಗಳನ್ನು ಕಳುಹಿಸಿದ ನಟ ರಾಜಶೇಖರ್ ಬಗ್ಗೆ ನಟಿ ಕಳೆದ ಸೋಮವಾರ ದೂರು ದಾಖಲಿಸಿದ್ದಳು. ನಟಿಯ ದೂರಿನ ಮೇರೆಗೆ ರಾಜಶೇಖರ್ ಬಂಧನವಾಗಿತ್ತು. ಬೇಲ್ ಪಡೆದುಕೊಂಡು ಹೊರಗೂ ಬಂದಾಗಿತ್ತು. ಸಂತ್ರಸ್ತ ಚಿತ್ರನಟಿಗೆ ಈಗ ಚಿತ್ರರಂಗದ ಪ್ರಮುಖರಿಂದ ಬೆಂಬಲ ಸಿಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ