Publish Date: Sat, 14 Nov 2020 (12:16 IST)
Updated Date: Sat, 14 Nov 2020 (12:17 IST)
ಚೆನ್ನೈ : ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ್ ಅವರು ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪ್ರಭುದೇವ ಅವರು ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮಾತ್ರ ಏರಿಳಿತ ಕಾಣುತ್ತಿದೆ. ಇವರು 1995ರಲ್ಲಿ ರಾಮಲತಾ ಅವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದರು, ಬಳಿಕ 2011ರಲ್ಲಿ ಅವರಿಂದ ವಿಚ್ಚೇಧನ ಪಡೆದು ನಟಿ ನಯನತಾರಾ ಅವರನ್ನು ಮದುವೆಯಾದರು. ಬಳಿಕ ಅವರಿಬ್ಬರು ಬೇರೆಯಾದರು.
ಇದೀಗ ಅವರು ಮೂರನೇ ಮದುವೆಗೆ ಸಿದ್ಧರಾಗಿದ್ದು, ತಮ್ಮ ಬಗ್ಗೆ ತಿಳಿದಿರುವ, ಪರಿಚಯವಿರುವ ಹುಡುಗಿಯನ್ನು ಮದುವೆಯಾಗಲು ಬಯಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರಭುದೇವ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.