Publish Date: Fri, 13 Nov 2020 (15:26 IST)
Updated Date: Fri, 13 Nov 2020 (15:28 IST)
ಚೆನ್ನೈ : 60 ವರ್ಷದ ನಟನೊಂದಿಗೆ ಜೋಡಿಯಾಗಿ ನಟಿಸುವುದರ ಮೂಲಕ ನಟ ಆರ್ಯ ಅವರ ಪತ್ನಿ ಸಯೀಷಾ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.
ಎ.ಎಲ್.ವಿಜಯ್ ನಿರ್ದೇಶನದ ವನಮಗನ್ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವು ಚಿತ್ರಗಳಲ್ಲಿ ನಟಿಸಿದ ಬಳಿಕ ನಟ ಆರ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಮದುವೆಯ ನಂತರವೂ ನಟನೆ ಮುಂದುವರಿಸಿದ ಅವರು ಕನ್ನಡ ಮತ್ತುತೆಲುಗು ಎರಡರಲ್ಲೂ ನಟಿಸುತ್ತಿದ್ದಾರೆ.
ಇದೀಗ ಅವರು ತೆಲುಗು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ಬಾಲಾ ಕೃಷ್ಣ ಅವರೊಂದಿಗೆ ಜೋಡಿಯಾಗಿ ನಟಿಸಲಿದ್ದಾರಂತೆ . ಸೊಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ ಎನ್ನಲಾಗಿದೆ.