ಮುಂಬೈ: ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾದ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾದ ಭರ್ಜರಿ ಕಲೆಕ್ಷನ್ನೊಂದಿಗೆ ಥಿಯೇಟರ್ಗಳಲ್ಲಿ ಮುನ್ನುಗ್ಗುತ್ತಿದೆ.
ಇನ್ನೂ ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ ₹95.3 ಕೋಟಿ ಸಂಗ್ರಹಿಸುವ ಮೂಲಕ ಹಿಂದಿನ ಬ್ಲಾಕ್ಬಸ್ಟರ್ ಸಿನಿಮಾದ ಶಾರುಖ್ ಖಾನ್ ನಟನೆಯ ಜವಾನ್ ಕಲೆಕ್ಷನ್ ಅನ್ನು ಮೀರಿಸಿದೆ. ಜವಾನ್ ಸಿನಿಮಾ ಬಿಡುಗಡೆಯಾದ ಮೊದಲ ದಿನ 74 ಕೋಟಿ ಗಳಿಸಿತು. ಜವಾನ್ ಭಾರತದಲ್ಲಿ ₹ 640.25 ಕೋಟಿ ನಿವ್ವಳ ಸಂಗ್ರಹಿಸಿದೆ ಮತ್ತು ವಿಶ್ವದಾದ್ಯಂತ ಒಟ್ಟು ₹ 1,160 ಕೋಟಿ ಸಂಗ್ರಹಿಸಿದೆ.
ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವನ್ನು ಜೂನ್ 27ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. ಇನ್ನೂ ಶನಿವಾರದಂದು ಚಿತ್ರ ₹ 67.1 ಕೋಟಿ ಕಲೆಕ್ಷನ್ ಮಾಡಿ, ವೀಕೆಂಡ್ ಎಲ್ಲ ಥಿಯೇಟರ್ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನೂ ಭಾನುವಾರ ಆಗಿರುವುದರಿಂದ ಇಂದಿನ ಕಲ್ಕಿ ಕೆಲಕ್ಷನ್ ಭಾರತ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ.
ವೈಜಯಂತಿ ಮೂವೀಸ್ನಿಂದ 600 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾದ 'ಕಲ್ಕಿ 2898 AD' ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗಿದೆ. ಇದು ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯೊಂದಿಗೆ, ಡಿಜೋರ್ಡ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ
ಕಲ್ಕಿ 2898 ADಯ ಪ್ರಭಾವಶಾಲಿ ತಾರಾಗಣದಲ್ಲಿ ಸೂಪರ್ಸ್ಟಾರ್ಗಳಾದ ಪ್ರಭಾಸ್, ದೀಪಿಕಾ ಪಡುಕೋಣೆ ಜೊತೆಗೆ ಚಲನಚಿತ್ರ ದಂತಕಥೆಗಳಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಇದ್ದಾರೆ. ದಿಶಾ ಪಟಾನಿ ಕೂಡ ಚಿತ್ರದ ಭಾಗವಾಗಿದ್ದಾರೆ.