Publish Date: Sat, 14 Jul 2018 (15:53 IST)
Updated Date: Sat, 14 Jul 2018 (16:00 IST)
ಹೈದರಾಬಾದ್: ಹಿನ್ನೆಲೆಗಾಯಕಿ ಕೆ. ರಾಣಿ (75) ಅವರು ಶುಕ್ರವಾರ ( (ಜು.13) ರಾತ್ರಿ ವಿಧಿವಶರಾಗಿದ್ದಾರೆ. ರಾಣಿ ಅವರು ಕನ್ನಡದ ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಗಾಳಿಗೋಪುರ ಮುಂತಾದ ಚಿತ್ರಗಳಲ್ಲಿ ಹಾಡಿದ್ದರು. ಕೆ. ರಾಣಿ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೈದರಾಬಾದ್ ಕಲ್ಯಾಣನಗರದ ನಿವಾಸದಲ್ಲಿ ನಿಧನರಾಗಿದ್ದಾರೆ.
ಇನ್ನು ರಾಣಿ ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳ, ಬಂಗಾಳಿ ಮಲಯಾಳಂ ಮತ್ತು ಉಜ್ಬೇಕ್ ಭಾಷೆಗಳಲ್ಲಿ ಹಾಡುತ್ತಿದ್ದರು. 500 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದ ರಾಣಿ ಶ್ರೀಲಂಕಾದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪ್ರಸಿದ್ಧರಾಗಿದ್ದರು. ಸಿಂಹಳ ಹಾಗು ಉಜ್ಬೇಕ್ ಭಾಷೆಗಳಲ್ಲಿ ಹಾಡಿದ್ದ ಭಾರತದ ಮೊದಲ ಮಹಿಳಾ ಗಾಯಕಿ ಎನ್ನುವ ಕೀರ್ತಿ ರಾಣಿ ಅವರದಾಗಿತ್ತು.
ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಶತಮಾನೋತ್ಸವದಲ್ಲಿ ಭಾಗವಹಿಸಿ ಹಾಡುವಂತೆ ಕರ್ನಾಟಕ ಸರ್ಕಾರ ರಾಣಿಯವರಿಗೆ ಆಹ್ವಾನ ನೀಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಲು ರಾಣಿಯವರಿಗೆ ಸರ್ಕಾರವೇ ವಿಶೇಷ ವಿಮಾನವನ್ನೂ ವ್ಯವಸ್ಥೆ ಕೂಡ ಮಾಡಿತ್ತು.