Select Your Language

Notifications

webdunia
webdunia
webdunia
webdunia

ಅಯೋಧ್ಯೆಯ ಜನರು ನಾಚಿಕೆಪಡಬೇಕು: ಸೋನು ನಿಗಮ್ ಆಕ್ರೋಶದ ಹಿಂದಿರುವ ಅಸಲಿ ಕಾರಣವೇನು

ಅಯೋಧ್ಯೆಯ ಜನರು ನಾಚಿಕೆಪಡಬೇಕು: ಸೋನು ನಿಗಮ್ ಆಕ್ರೋಶದ ಹಿಂದಿರುವ ಅಸಲಿ ಕಾರಣವೇನು

sampriya

ಮುಂಬೈ , ಗುರುವಾರ, 6 ಜೂನ್ 2024 (17:32 IST)
Photo By X
ಮುಂಬೈ: ಲೋಕಸಭೆ ಚುನಾವಣೆಗಳ ಫಲಿತಾಂಶ ಹೊರಬಿದ್ದು ದಿನಗಳಾಗುತ್ತಾ ಬಂದರೂ ಬಿಜೆಪಿ ಜಸ್ಟ್‌ ಪಾಸ್‌ ಆಗಿರುವುದು ಬಿಜೆಪಿ ವಲಯಕ್ಕೆ ದೊಡ್ಡ ಆಘಾತತಂದಿದೆ. ಅದರಲ್ಲೂ ಬಿಜೆಪಿ ಪಕ್ಷ  ಅಯೋಧ್ಯೆ ಮತ್ತು ಹೊಸದಾಗಿ ನಿರ್ಮಿಸಲಾದ ರಾಮಮಂದಿರವನ್ನು ಹೊಂದಿರುವ ಫೈಜಾಬಾದ್‌ನಲ್ಲಿ ಹೀನಾಯ ಸೋಲು ಕಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಇನ್ನೂ ಅಯೋದ್ಯೆಯಲ್ಲಿ ಸೋಲು ಕಂಡಿರುವುದಕ್ಕೆ  ಖ್ಯಾತ ಗಾಯಕ ಸೋನು ನಿಗಮ್ ಅವರ ಆಕ್ರೋಶ ಹೊರಹಾಕಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋನು ನಿಗಮ್ ಪೋಸ್ಟ್‌ನಲ್ಲಿ ಹೀಗಿದೆ.

ಅಯೋಧ್ಯೆ ಮತದಾರರು ತಮ್ಮ ಶ್ರಮದ ಹೊರತಾಗಿಯೂ ಬಿಜೆಪಿಯನ್ನು ಆಯ್ಕೆ ಮಾಡಲಿಲ್ಲ ಎಂದು ಸೋನು ನಿಗಮ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ, “ಇಡೀ ಅಯೋಧ್ಯೆಯನ್ನು ಸುಂದರಗೊಳಿಸಿದ ಸರ್ಕಾರ, ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ನೀಡಿತು, 500 ವರ್ಷಗಳ ನಂತರ ರಾಮ ಮಂದಿರವನ್ನು ನಿರ್ಮಿಸಿತು, ಸಂಪೂರ್ಣ ದೇವಾಲಯದ ಆರ್ಥಿಕತೆಯನ್ನು ಸೃಷ್ಟಿಸಿತು, ಆ ಪಕ್ಷವು ಅಯೋಧ್ಯೆ ಸ್ಥಾನಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಅಯೋಧ್ಯೆಯ ಜನರು ನಾಚಿಕೆಪಡಬೇಕು ಎಂದು ಬರೆದುಕೊಂಡಿರುವ ಪೋಸ್ಟ್‌ ವೈರಲ್‌ ಆಗಿದೆ.

ನಿಜವಾದ ಸತ್ಯ: ಆದಾಗ್ಯೂ, ನಿಜವಾದ ಸತ್ಯ ಏನೆಂದರೆ  ಈ ಪೋಸ್ಟ್‌ ಮಾಡಿರುವುದು ಸೋನು ನಿಗಮ್‌ ಅವರಲ್ಲ ಎಂದು ತಿಳಿದುಬಂದಿದೆ.

ಇದನ್ನು ಸ್ಪಷ್ಟಪಡಿಸಿದ ಸೋನು ಸೂದು ಅವರು, ಈ ರಿತಿಯ ಘಟನಾವಳಿಗಳಿಂದಲೇ ನಾನು ಏಳು ವರ್ಷಗಳ ಹಿಂದೆ ಟ್ವಿಟರ್‌ ಖಾತೆಯಿಂದ ಹೊರ ಬಂದಿರುವುದು.  ಸಂವೇದನಾಶೀಲ ರಾಜಕೀಯ ಟೀಕೆಗಳನ್ನು ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ ಮತ್ತು ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸುತ್ತೇನೆ. ಆದರೆ ಈ ಘಟನೆಯು ನನಗೆ ಮಾತ್ರವಲ್ಲ, ನನ್ನ ಕುಟುಂಬದ ಸುರಕ್ಷತೆಗೂ ಆತಂಕಕಾರಿಯಾಗಿದೆ, ”ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಶನಲ್‌ ಕ್ರಶ್‌ ಅಭಿನಯಕ್ಕೆ ಮನಸೋತ ನಟಿ ಕಾಜಲ್‌ ಅಗರ್ವಾಲ್‌ ಪತಿ ಗೌತಮ್‌