Select Your Language

Notifications

webdunia
webdunia
webdunia
webdunia

ಸರ್ಕಾರ ರಚನೆ ಆಗುತ್ತೋ ಬಿಡುತ್ತೋ ಬಿಜೆಪಿ ಸಂಭ್ರಮ ಬಲು ಜೋರು

ಸರ್ಕಾರ ರಚನೆ ಆಗುತ್ತೋ ಬಿಡುತ್ತೋ ಬಿಜೆಪಿ ಸಂಭ್ರಮ ಬಲು ಜೋರು

sampriya

ಬೆಂಗಳೂರು , ಮಂಗಳವಾರ, 4 ಜೂನ್ 2024 (18:32 IST)
Photo By X
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ವಿಜಯದ ದಡ ಸೇರುತಿದ್ದ ಹಾಗೇ ಬಿಜೆಪಿ ನಾಯಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್‌ ಅಶೋಕ್‌, ಬಿಜೆಪಿ ನಾಯಕ ಸಿಟಿ ರವಿ ಸೇರಿದಂತೆ ಅನೇಕ ನಾಯಕರು ಸಿಹಿ ಹಂಚಿನ ಸಂಭ್ರಮಿಸಿದರು. ಅದಲ್ಲದೆ ಹಾಡಿಗೆ ಸ್ಟೇಪ್‌ ಹಾಕಿ ಖುಷಿ ವ್ಯಕ್ಯಪಡಿಸಿದರು.

ರಾಜ್ಯದಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ, 9 ಕ್ಷೇತ್ರಗಳ್ಲಲಿ ಕಾಂಗ್ರೆಸ್‌ ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿದೆ. ಇನ್ನೂ ದೇಶದಲ್ಲಿ 292 ಸ್ಥಾನಗಳಲ್ಲಿ ಎನ್‌ಡಿಎ ಒಕ್ಕೂಟ, ಇಂಡಿಯಾ 233 ಹಾಗೂ ಇತರೆ 18 ಸ್ಥಾನಗಳಲ್ಲಿ ನಗೆಲುವು ಸಾಧಿಸಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 350ರಿಂದ 360 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ನುಡಿದಿದ್ದು, ಆದರೆ ಈ ಲೆಕ್ಕಚಾರ ಉಲ್ಟಾ ಆಗಿದೆ. ಎಕ್ಸಿಟ್ ಪೋಲ್ ಭವಿಷ್ಯ ಈಗ ಸುಳ್ಳಾಗಿ ಹೋಗಿದೆ. ಅದರಲ್ಲೂ ಇಷ್ಟು ದಿನ ಕಾಂಗ್ರೆಸ್ ಪಕ್ಷ 50 ನಂಬರ್ ದಾಟಲ್ಲ ಎಂದು ಹೇಳುತ್ತಿದ್ದ ಅಂಕಿ & ಅಂಶ ಉಲ್ಟಾ ಆಗಿದೆ. ಹೀಗಿದ್ದಾಗಲೇ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಸರ್ಕಸ್ ಕೂಡ ಶುರುವಾಗಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕಿಂಗ್‌ ನ್ಯೂಸ್: ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ