ಹೈದಾರಾಬಾದ್: ಟಾಲಿವುಡ್‌ನ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರ ಪತಿ ಗೌತಮ್ ಅವರಿಗೆ ಟಾಲಿವುಡ್‌ನ ಕೆಲ ಸ್ಟಾರ್ ನಟಿಯರ ಸಿನಿಮಾಗಳೆಂದರೆ ತುಂಬಾ ಇಷ್ಟವಂತೆ.
ಈ ಬಗ್ಗೆ ನಟಿ ಕಾಜಲ್ ಅವರು ಈಚೆಗೆ ಅವರ ಅಭಿನಯದ ಸತ್ಯಭಾಮಾ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ತನ್ನ ಪತಿ ಬಿಡುವು ಸಿಕ್ಕಾಗೆಲ್ಲ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ವಿಶೇಷವಾಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ನಾಯಕಿ ಸಮಂತಾ, ರಶ್ಮಿಕಾ ಮತ್ತು ರಾಶಿ ಖನ್ನಾ ಅವರ ಸಿನಿಮಾಗಳನ್ನು ಅವರು ತುಂಬಾನೇ ಇಷ್ಟಪಡುತ್ತಾರೆ ಎಂದರು.
ಇನ್ನೂ ತಮ್ಮ ಜೀವನ ಇಷ್ಟೊಂದು ಸುಗಮವಾಗಿ ಸಾಗಲು ಅದಕ್ಕೆ ಪತಿ ಗೌತಮ್ ಅವರ ಬೆಂಬಲವಾಗಿದ್ದು, ಅದರಿಂದ ಸಿನಿಮಾ ಮಾಡುತ್ತಿದ್ದೇನೆ. ಅವರ ಪ್ರೋತ್ಸಾಹದಿಂದಲೇ ಇದೀಗ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಸಿನಿಮಾ ಮಾಡುತ್ತೇನೆ ಎಂದರು.