ಪವಿತ್ರಾ ಜಯರಾಂ ಕೊನೆಯ ಮಾತು, ಆಕೆ ಸಾವಿಗೆ ಕಾರಣ ತಿಳಿಸಿದ ಸ್ನೇಹಿತ

Krishnaveni K
ಸೋಮವಾರ, 13 ಮೇ 2024 (14:52 IST)
ಮಂಡ್ಯ: ಮೊನ್ನೆ ತಡರಾತ್ರಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಕನ್ನಡ, ತೆಲುಗು ಕಿರುತೆರೆ ನಟಿ ಪವಿತ್ರಾ ಜಯರಾಂ ಅಂತ್ಯ ಕ್ರಿಯೆ ಇಂದು ಮಂಡ್ಯದಲ್ಲಿ ನಡೆದಿದೆ. ಅಪಘಾತದ ವೇಳೆ ಜೊತೆಗಿದ್ದ ಸ್ನೇಹಿತ ಚಂದ್ರು ಆಕೆಗೆ ಏನಾಗಿತ್ತು ಎಂಬುದನ್ನು ವಿವರವಾಗಿ ಹೇಳಿದ್ದಾರೆ.

ಇಂದು ಮಂಡ್ಯದಲ್ಲಿ ಊರವರ ಸಮ್ಮುಖದಲ್ಲಿ ಪವಿತ್ರಾ ಮೃತದೇಹಕ್ಕೆ ಮಕ್ಕಳು ಅಗ್ನಿಸ್ಪರ್ಶ ಮಾಡಿದರು. ಪುತ್ರಿ ಮತ್ತು ಪುತ್ರ ಜೊತೆ ಸೇರಿಕೊಂಡು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಮಕ್ಕಳ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಪಘಾತದ ಸಂದರ್ಭದಲ್ಲಿ ಪವಿತ್ರಾ ಜೊತೆಗಿದ್ದ ಸ್ನೇಹಿತ ಚಂದ್ರು ಘಟನೆ ಬಗ್ಗೆ ಇಂಚಿಂಚೂ ವಿವರ ನೀಡಿದ್ದಾರೆ. ‘ಅಪಘಾತದಲ್ಲಿ ನನಗೆ ಕೈ, ಕಾಲು ಫ್ರಾಕ್ಚರ್ ಆಗಿತ್ತು. ನನ್ನ ಪಕ್ಕವೇ ಪವಿತ್ರಾ ಕೂತಿದ್ದರು ಅವರಿಗೆ ಹೆಚ್ಚೇನೂ ಆಗಿರಲಿಲ್ಲ. ಎದುರು ಡ್ರೈವರ್ ಮತ್ತು ಅವರ ಜೊತೆಗೆ ಕೂತಿದ್ದ ಇನ್ನೊಬ್ಬರಿಗೂ ಏನೂ ಆಗಿರಲಿಲ್ಲ. ಅಪಘಾತವಾದಾಗ ಭಯಗೊಂಡು ಪವಿತ್ರ ‘ಏನಾಯ್ತು ಏನಾಯ್ತು’ ಎಂದು ಏದುಸಿರು ಬಿಡುತ್ತಾ ಕೇಳಿದ್ದರು. ಹಾಗೆ ಕೇಳುತ್ತಲೇ ಅವರು ಕೊನೆಯುಸಿರೆಳೆದರು’ ಎಂದು ಸ್ನೇಹಿತ ಅಳುತ್ತಾ ಹೇಳಿದ್ದಾರೆ.

ಅಪಘಾತವಾದ ತಕ್ಷಣ ಆಂಬ್ಯುಲೆನ್ಸ್ ಬಂದಿದ್ದರೆ ಪವಿತ್ರಾ ಬದುಕುಳಿಯುತ್ತಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಅಪಘಾತವಾಗಿ 20 ನಿಮಿಷ ಬಳಿಕ ಆಂಬ್ಯುಲೆನ್ಸ್ ಬಂದಿತ್ತು. ಬಹುಶಃ ತಕ್ಷಣವೇ ಆಂಬ್ಯುಲೆನ್ಸ್ ಬಂದಿದ್ದರೆ ಜೀವ ಬದುಕಿಕೊಳ್ಳುತ್ತಿತ್ತು ಎಂದು ಪವಿತ್ರಾ ಬಾವ ಲೋಕೇಶ್ ಮಾ‍ಧ‍್ಯಮಗಳಿಗೆ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮುಂದಿನ ಸುದ್ದಿ
Show comments