Webdunia - Bharat's app for daily news and videos

Install App

ವಿಜಯಲಕ್ಷ್ಮಿಯಿಂದ ದರ್ಶನ್ ಎಷ್ಟೆಲ್ಲಾ ಅನುಭವಿಸಿದ್ದಾರೆ ನೆನೆಸಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದ ಪವಿತ್ರಾ ಗೌಡ

Krishnaveni K
ಮಂಗಳವಾರ, 18 ಜೂನ್ 2024 (10:46 IST)
ಬೆಂಗಳೂರು: 10 ವರ್ಷದ ಹಿಂದೆ ದರ್ಶನ್ ವೈಯಕ್ತಿಕ ಜೀವನ ಯಾವ ಪರಿಸ್ಥಿತಿಯಲ್ಲಿತ್ತು, ಆಗ ಜೊತೆಯಾಗಿದ್ದು ಯಾರು ಎಂದು ಹಿಂದೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪವಿತ್ರಾಗೌಡ ಟಾಂಗ್ ಕೊಟ್ಟಿದ್ದರು. ಇಂದು ಅದೇ ಪವಿತ್ರಾರಿಂದ ದರ್ಶನ್ ಜೈಲು ಸೇರುವಂತಾಗಿದೆ.

ಈ ಹಿಂದೆ ಪವಿತ್ರಾಗೌಡ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿರುವ ಫೋಟೋ ಹಾಕಿ ನಮ್ಮ ಸಂಬಂಧಕ್ಕೆ 10 ವರ್ಷ ಎಂದಿದ್ದಕ್ಕೆ ಪತ್ನಿ ವಿಜಯಲಕ್ಷ್ಮಿ ಸಿಟ್ಟಾಗಿದ್ದರು. ಪವಿತ್ರಾ ಗೌಡ ಮಗಳು ದರ್ಶನ್ ಮಗಳು ಎಂದಿದ್ದಕ್ಕೆ ವಿಜಯಲಕ್ಷ್ಮಿ ಆಕೆಯ ನಿಜವಾದ ತಂದೆ ಯಾರು ಎಂದು ಹಳೆಯ ಫೋಟೋಗಳನ್ನು ಪ್ರಕಟಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ವಿರುದ್ಧ ಹರಿಹಾಯ್ದಿದ್ದರು. ವಿಜಯಲಕ್ಷ್ಮಿಗೆ ನನ್ನ ವೈಯಕ್ತಿಕ ಜೀವನದ ಬಗ್ಗೆ, ಹಳೆಯ ಫೋಟೋಗಳನ್ನು ಪ್ರಕಟಿಸುವುದಕ್ಕೆ ಹಕ್ಕು ಇಲ್ಲ. ನನ್ನ ಮಗಳು ದರ್ಶನ್ ಮಗಳು ಎಂದು ನಾನು ಎಲ್ಲೂ ಹೇಳಿಕೊಂಡಿಲ್ಲ ಎಂದಿದ್ದರು.

ಅಲ್ಲದೆ, ‘ಕೆಲವು ಸಮಯದ ಮೊದಲು ನಾನು ದರ್ಶನ್ ಜೀವನದಲ್ಲಿ ಬರುವುದಕ್ಕೂ ಮುನ್ನ ಇಬ್ಬರ ನಡುವೆ ಏನೆಲ್ಲಾ ಸಮಸ್ಯೆಗಳಿತ್ತು. ದರ್ಶನ್ ಎಷ್ಟೆಲ್ಲಾ ಅನುಭವಿಸಿದ್ದರು ಎಂದು ನಿಮಗೆಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದೇ ಇದ್ದರೆ ಅದನ್ನು ನೆನೆಸಿಕೊಳ್ಳಿ’ ಎಂದಿದ್ದರು. ಆ ಮೂಲಕ ಇದಕ್ಕೆ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದಾಗ ದೂರು ದಾಖಲಿಸಿ ದರ್ಶನ್ ಜೈಲಿಗೆ ಹೋಗುವಂತಾದ ಘಟನೆ ಬಗ್ಗೆ ಹೇಳಿಕೊಂಡಿದ್ದರು.

ಆದರೆ ಈಗ ಅದೇ ಪವಿತ್ರಾ ಗೌಡರಿಂದಾಗಿ ದರ್ಶನ್ ಹತ್ಯೆ ಕೇಸ್ ನಲ್ಲಿ ಸಿಲುಕಿಕೊಂಡು ಜೈಲು ಸೇರುವಂತಾಗಿದೆ. ಆಗ ಕೌಟುಂಬಿಕ ಕಲಹವಾಗಿದ್ದರಿಂದ ರಾಜಿಯಲ್ಲಿ ಇತ್ಯರ್ಥವಾಗಿತ್ತು. ಆದರೆ ಈಗ ಹತ್ಯೆ ಪ್ರಕರಣವಾಗಿದ್ದು ದರ್ಶನ್ ಗೆ ಅಷ್ಟು ಬೇಗ ಬಿಡುಗಡೆ ಭಾಗ್ಯ ದೊರೆಯುವುದು ಅನುಮಾನವಾಗಿದೆ. ಅವರ ಜೊತೆ ಸಹಕರಿಸಿದ ಪವಿತ್ರಾ ಗೌಡ ಕೂಡಾ ಜೈಲು ಕಂಬಿ ಎಣಿಸಬೇಕಾಗಿ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ರು ಖಡಕ್ ರಿಪ್ಲೈ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಮುಂದಿನ ಸುದ್ದಿ
Show comments