Select Your Language

Notifications

webdunia
webdunia
webdunia
webdunia

ಪವಿತ್ರಾ ಗೌಡ ಅರೆಸ್ಟ್ ಮಾಡಲು ಬಂದ ಪೊಲೀಸರು: ಟೈಂ ಕೇಳಿದ ಪವಿತ್ರಾ

Pavithra Gowda

Krishnaveni K

ಬೆಂಗಳೂರು , ಗುರುವಾರ, 14 ಆಗಸ್ಟ್ 2025 (14:22 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸುತ್ತಿದ್ದಂತೇ ಇದೀಗ ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಲು ಪೊಲೀಸರು ಅವರ ಆರ್ ಆರ್ ನಗರದ ಮನೆಗೆ ಬಂದಿದ್ದಾರೆ.

ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸುತ್ತಿದ್ದಂತೇ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ಮನೆ ಮುಂದೆ ಪ್ರತ್ಯಕ್ಷರಾಗಿದ್ದರು. ಅತ್ತ ದರ್ಶನ್ ಮನೆಯ ಮುಂದೆಯೂ ಪೊಲೀಸರು ಜಮಾಯಿಸಿದ್ದರು. ಆದರೆ ದರ್ಶನ್ ಆರ್ ಆರ್ ನಗರ ಮನೆಯಲ್ಲಿರಲಿಲ್ಲ.

ಆದರೆ ಪವಿತ್ರಾ ಮನೆಯೊಳಗೇ ಇದ್ದರು. ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಲು ಮಹಿಳಾ ಸಿಬ್ಬಂದಿಗಳೂ ಬಂದಿದ್ದಾರೆ. ಮನೆಯೊಳಗೆ ಹೋಗಿರುವ ಸಿಬ್ಬಂದಿಗಳು ಇನ್ನಷ್ಟೇ ಆಕೆಯನ್ನು ಹೊರಗೆ ಕರೆತರಬೇಕಿದೆ. ಮನೆಯಿಂದ ಹೊರಡುವ ಮುನ್ನ ಅಧಿಕಾರಿಗಳ ಬಳಿ ಪವಿತ್ರಾ ಕೊಂಚ ಸಮಯ ಕೇಳಿರುವ ಸಾಧ್ಯತೆಯಿದೆ. ಅಲ್ಲದೆ, ಪವಿತ್ರಾಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ. ಇದಾದ ಬಳಿಕ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ನೇರವಾಗಿ ಜೈಲಿಗೆ ತೆರಳಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರದೋಶ್‌ ಪಾತ್ರವೇನು ಗೊತ್ತಾ