Select Your Language

Notifications

webdunia
webdunia
webdunia
webdunia

Oscars: ಭಾರತಕ್ಕೆ ಈ ಬಾರಿ ಆಸ್ಕರ್ ನಲ್ಲಿ ನಿರಾಸೆ

Oppenheimer

Krishnaveni K

ಲಾಸ್ ಏಂಜಲೀಸ್ , ಸೋಮವಾರ, 11 ಮಾರ್ಚ್ 2024 (12:08 IST)
Photo Courtesy: Twitter
ಲಾಸ್ ಏಂಜಲೀಸ್: ಕಳೆದ ಬಾರಿಯ ಆಸ್ಕರ್ ಭಾರತೀಯರ ಪಾಲಿಗೆ ಸ್ಮರಣೀಯವಾಗಿತ್ತು. ಆದರೆ ಈ ಬಾರಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತಕ್ಕೆ ನಿರಾಸೆಯಾಗಿದೆ.

ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಓಪನ್ ಹೈಮರ್ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಇದೇ ಸಿನಿಮಾದಲ್ಲಿನ ನಟನೆಗಾಗಿ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಮತ್ತು ಪೂರ್ ಥಿಂಗ್ ಸಿನಿಮಾದ ನಟನೆಗಾಗಿ ಎಮ್ಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ನಿರ್ದೇಶಕರಾಗಿ ಓಪನ್ ಹೈಮರ್ ಸಿನಿಮಾದ ಕ್ರಿಸ್ಟೋಫರ್ ನೋಲನ್, ಇದೇ ಸಿನಿಮಾದಲ್ಲಿನ ನಟನೆಗಾಗಿ ರಾಬರ್ಟ್ ಡೌನಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ದಿ ಹೋಲ್ಡೋವರ್ಸ್ ಸಿನಿಮಾದ ನಟನೆಗಾಗಿ ಡೇವಿನ್ ರಾಯ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ಬಾರಿ ಆಸ್ಕರ್ ನಲ್ಲಿ ಭಾರತದ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಭಾರತದ ಡಾಕ್ಯುಮೆಂಟರಿ ಟು ಕಿಲ್ ಎ ಟೈಗರ್ ಗೆ ಪ್ರಶಸ್ತಿ ಸಿಗದೇ ನಿರಾಸೆ ಅನುಭವಿಸಬೇಕಾಯಿತು. ಇದರ ಹೊರತಾಗಿ ಭಾರತದ ಯಾವುದೇ ಸಿನಿಮಾಗಳೂ ಈ ಬಾರಿ ಆಸ್ಕರ್ ರೇಸ್ ನಲ್ಲಿರಲಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ದಾಸ್ ರಿಸೆಪ್ಷನ್ ಗೆ ಗೈರಾದ ಶೈನ್ ಶೆಟ್ಟಿ: ಬಿಗ್ ಬಾಸ್ ನ ಸ್ನೇಹಿತರೆಲ್ಲಾ ಹಾಜರ್