Webdunia - Bharat's app for daily news and videos

Install App

ಚಿರಂಜೀವಿ ಸರ್ಜಾ ನಿಧನರಾಗಿ ವಾರ ಕಳೆದ ಮೇಲೆ ದುಃಖ ಹೊರಹಾಕಿದ ಕುಟುಂಬ

Webdunia
ಭಾನುವಾರ, 14 ಜೂನ್ 2020 (09:06 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿ ಇಂದಿಗೆ ಒಂದು ವಾರ ಕಳೆದಿದೆ. ಆದರೆ ಅವರ ಅಭಿಮಾನಿಗಳು, ಕುಟುಂಬದವರು, ಆಪ್ತರಿಗೆ ಇನ್ನೂ ಚಿರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.


ಕಳೆದ ವಾರ ಇದೇ ದಿನ ಹೃದಯಾಘಾತದಿಂದಾಗಿ ಚಿರು ಹಠಾತ್ ನಿಧನರಾಗಿ ಎಲ್ಲರನ್ನೂ ಶಾಕ್ ಗೊಳಗಾಗಿಸಿದ್ದರು. ಈ ಶಾಕ್ ನಿಂದ ಹೊರಬಾರದ ಅವರ ಕುಟುಂಬ ವರ್ಗ ಮನೆ ಬಿಟ್ಟು ಎಲ್ಲೂ ಹೋಗಿಲ್ಲ.

ಆದರೆ ಸಾಮಾಜಿಕ ಜಾಲತಾಣದ ಮೂಲಕ ಸಹೋದರ ಧ್ರುವ ಸರ್ಜಾ, ಧ್ರುವ ಪತ್ನಿ ಪ್ರೇರಣಾ, ಐಶ್ವರ್ಯಾ ಸರ್ಜಾ, ಅರ್ಜುನ್ ಸರ್ಜಾ ಚಿರು ಬಗೆಗಿನ ನೆನಪುಗಳನ್ನು ಹಂಚಿಕೊಂಡು ತಮ್ಮ ದುಃಖ ಹೊರಹಾಕುತ್ತಿದ್ದಾರೆ. ಅರ್ಜುನ್ ಸರ್ಜಾ ಮೊನ್ನೆಯೇ ಮಿಸ್ ಮೈ ಬಾಯ್ ಎಂದು ಚಿರು ಜತೆಗಿನ ಖುಷಿಯ ಕ್ಷಣದ ಫೋಟೋ ಪ್ರಕಟಿಸಿದ್ದರು.

ಅದಾದ ಬಳಿಕ ಧ್ರುವ ಸರ್ಜಾ ಮತ್ತು ಐಶ್ವರ್ಯಾ ಸರ್ಜಾ ಚಿರು ಜತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಮರಳಿ ಬಾ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೆ ಧ್ರುವ ಚಿರು ಜತೆಗಿನ ಹಳೆಯ ಫೋಟೋಗಳನ್ನು ಹಾಕಿಕೊಂಡು ನಮ್ಮಣ್ಣ, ನನ್ನ ಜಗತ್ತು ಎಂದು ಬರೆದುಕೊಂಡು ನೆನಪು ಮಾಡಿಕೊಂಡಿದ್ದಾರೆ. ಧ್ರುವ ಪತ್ನಿ ಪ್ರೇರಣಾ ಕೂಡಾ ಭಾವ ಜತೆಗಿನ ಟಿಕ್ ಟಾಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಹೇ ಚಿರು ನಿಮ್ಮ ಸಿಲ್ಸ್ (ಅತ್ತಿಗೆ) ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಆದರೆ ಚಿರು ಪತ್ನಿ ಮೇಘನಾ ಇದುವರೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ಮುಂದಿನ ಸುದ್ದಿ
Show comments