Select Your Language

Notifications

webdunia
webdunia
webdunia
webdunia

ದರ್ಶನ್ ಬಿಡುಗಡೆಯಾಗ್ತಾರೆಂದು ಭಯ ಬಿದ್ದಿದ್ದಾರಂತೆ ಪ್ರಥಮ್: ಮಾಡಿದ್ದೇನು ನೋಡಿ

Pratham-Darshan

Krishnaveni K

ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2024 (14:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಇಂದು ತೀರ್ಪು ಹೊರಬೀಳಲಿದೆ. ಅದಕ್ಕೆ ಮೊದಲು ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮಾಡಿರುವ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.

ಈ ಹಿಂದೆ ದರ್ಶನ್ ಅರೆಸ್ಟ್ ಆದ ಸಂದರ್ಭದಲ್ಲಿ ದರ್ಶನ್ ರನ್ನು ಬೆಂಬಲಿಸುವವರ ಬಗ್ಗೆ ಪ್ರಥಮ್ ಇನ್ನಿಲ್ಲದಂತೆ ಟೀಕಿಸಿದ್ದರು. ರೇಣುಕಾಸ್ವಾಮಿ ಕುಟುಂಬಸ್ಥರನ್ನೂ ಭೇಟಿಯಾಗಿ ಬಂದಿದ್ದರು. ತೀರಾ ಇತ್ತೀಚೆಗೆ ನಟ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾ ಎದುರಿಗೇ ನನ್ನ ಸಿನಿಮಾ ಬಿಡುಗಡೆ ಮಾಡ್ತೀನಿ ಎಂದು ಸವಾಲು ಹಾಕಿದ್ದರು.

ಆದರೆ ಈಗ ದರ್ಶನ್ ಜಾಮೀನಿನ ಮೇಲೆ ಹೊರಬರುವ ವಿಶ್ವಾಸದಲ್ಲಿದ್ದಾರೆ ಎಂಬ ವರದಿಗಳು ಬರುತ್ತಿದ್ದಂತೇ  ಪ್ರಥಮ್ ಪ್ಲೇಟ್ ಬದಲಾಯಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಶೀಘ್ರದಲ್ಲೇ ದರ್ಶನ್ ಬಿಡುಗಡೆಯಾಗಲೆಂದು ಈಶ್ವರನಲ್ಲಿ ಪ್ರಾರ್ಥನೆ ಮಾಡುವುದಾಗಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಪ್ರಥಮ್ ರ ಕಾಲೆಳೆದಿದ್ದಾರೆ. ಡಿ ಬಾಸ್ ಬಿಡುಗಡೆಯಾದರೆ ಉಳಿಗಾಲವಿಲ್ಲ ಎಂದು ಈಗ ಭಯ ಬಿದ್ದು ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ನೀವು ಏನೇ ಪೋಸ್ಟ್ ಹಾಕಿದ್ದರೂ ನಿಮಗೆ ನಮ್ಮ ಬೆಂಬಲವಿಲ್ಲ ಎಂದು ದರ್ಶನ್ ಫ್ಯಾನ್ಸ್ ಕಿಡಿ ಕಾರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿರುವುದರ ಹಿಂದಿರುವ ಅಸಲಿ ಕಾರಣ ಇಲ್ಲಿದೆ