ಧೂಳೆಬ್ಬಿಸಿದ ಎನ್‌ಟಿಆರ್‌ ಸಿನಿಮಾ ದೇವರ: ಮೊದಲ ದಿನವೇ ದಾಖಲೆ ಕಲೆಕ್ಷನ್‌

Sampriya
ಶನಿವಾರ, 28 ಸೆಪ್ಟಂಬರ್ 2024 (14:52 IST)
Photo Courtesy X
ಹೈದರಾಬಾದ್​: ಜೂನಿಯರ್‌ ಎನ್ ಟಿಆರ್ ನಟನೆಯ ಬಹು ನಿರೀಕ್ಷಿತ ದೇವರ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇವರ ಚಿತ್ರ ಮೊದಲ ದಿನ ವಿಶ್ವದಾದ್ಯಂತ ಒಟ್ಟು 172 ಕೋಟಿ (ಮೊದಲ ದಿನದ ಕಲೆಕ್ಷನ್) ಮಾಡಿದೆ. ಭಾರತದಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಮನರಂಜನಾ ಚಿತ್ರವು ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೀ ಸೇಲ್ ಬುಕ್ಕಿಂಗ್ ನಲ್ಲಿ ಸಹ ಹಲವು ದಾಖಲೆ ಬರೆದಿತ್ತು. ಈ ಸಿನಿಮಾ ಮೊದಲ ದಿನದ ಕಲೆಕ್ಷನ್ ದಾಖಲೆ ಬರೆದಿದೆ.

ದೇವರ ಚಿತ್ರದಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಬೆಂಬಲ ನೀಡಿದ ಪ್ರೇಕ್ಷಕರಿಗೆ ಎನ್ ಟಿಆರ್ ಧನ್ಯವಾದ ಹೇಳಿದ್ದಾರೆ.

ಅಭಿಮಾನಿಗಳ ಸಂಭ್ರಮದಿಂದ ನನ್ನ ಹೃದಯ ತುಂಬಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ನೀವು ನನ್ನಂತೆಯೇ ಚಿತ್ರವನ್ನು ಆನಂದಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments