Publish Date: Wed, 08 Dec 2021 (10:44 IST)
Updated Date: Wed, 08 Dec 2021 (10:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಆದರೆ ಇದುವರೆಗೆ ಸಿನಿಮಾ ಬಗ್ಗೆ ಒಂದೇ ಒಂದು ಸುಳಿವು ಸೋಷಿಯಲ್ ಮೀಡಿಯಾದಲ್ಲಿ ಹೊರಬಂದಿಲ್ಲ. ಇದಕ್ಕೆ ಕಾರಣವೂ ಇದೆ.
ಕ್ರಾಂತಿ ಸಿನಿಮಾ ಸೆಟ್ಟಲ್ಲಿ ಮ್ಯಾನೇಜರ್ ಬಿಟ್ಟರೆ ಉಳಿದೆಲ್ಲರಿಗೂ ಮೊಬೈಲ್, ಮತ್ತಿತರ ಗ್ಯಾಜೆಟ್ ತರಬಾರದು ಎಂದು ಕಟ್ಟುನಿಟ್ಟಿನ ನಿಯಮ ಮಾಡಲಾಗಿದೆಯಂತೆ. ಇದನ್ನು ಸ್ವತಃ ದರ್ಶನ್ ಮತ್ತು ರಚಿತಾ ರಾಂ ಕೂಡಾ ಪಾಲಿಸುತ್ತಿದ್ದಾರಂತೆ.
ಸಿನಿಮಾ ಪ್ರಚಾರ ಶುರುವಾಗುವವರೆಗೂ ಸಿನಿಮಾ ಬಗ್ಗೆ ಯಾವುದೇ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಬಾರದು ಎಂಬ ಕಾರಣಕ್ಕೆ ಚಿತ್ರತಂಡ ಈ ಕಟ್ಟುನಿಟ್ಟಿನ ನಿಯಮ ಮಾಡಿದೆ ಎನ್ನಲಾಗಿದೆ.