Select Your Language

Notifications

webdunia
webdunia
webdunia
webdunia

ಭಟ್ಟರ ಗರಡಿ ಮನೆ ಪ್ರವೇಶಿಸಿದ ರಚಿತಾ ರಾಂ

ಭಟ್ಟರ ಗರಡಿ ಮನೆ ಪ್ರವೇಶಿಸಿದ ರಚಿತಾ ರಾಂ
ಬೆಂಗಳೂರು , ಸೋಮವಾರ, 6 ಡಿಸೆಂಬರ್ 2021 (09:47 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಂ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾಗೆ ರಚಿತಾ ನಾಯಕಿ.

ಈ ಸಿನಿಮಾದಲ್ಲಿ ಯಶಸ್ ಸೂರ್ಯಗೆ ಜೋಡಿಯಾಗಿ ರಚಿತಾ ಅಭಿನಯಿಸಲಿದ್ದಾರೆ. ಇವರಲ್ಲದೆ, ಸಚಿವ, ನಟ ಬಿ.ಸಿ. ಪಾಟೀಲ್ ಕೂಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು. ಸ್ಯಾಂಡಲ್ ವುಡ್ ನ ಬ್ಯುಸಿಯೆಷ್ಟು ನಟಿಯಾಗಿರುವ ರಚಿತಾ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನೇ ಒಪ್ಪಿಕೊಳ್ಳುತ್ತಾರೆ. ಹೊಸಬರಿಂದ ಹಿಡಿದು ಸ್ಟಾರ್ ನಟರವರೆಗಿನ ಸಿನಿಮಾಗೂ ರಚಿತಾ ಬೇಡಿಕೆಯ ನಟಿ. ಇದೀಗ ಅವರ ಸಿನಿಮಾಗಳ ಲಿಸ್ಟ್ ಗೆ ಮತ್ತೊಂದು ವಿಭಿನ್ನ ಪಾತ್ರ ಸೇರ್ಪಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಕೊನೆಯ ಕನಸು ನನಸು ಮಾಡಲಿರುವ ಮಾಲಾಶ್ರೀ