Webdunia - Bharat's app for daily news and videos

Install App

ಫಿಲಂ ಫೇರ್ ನಲ್ಲಿ ಕಾಟೇರನಿಗೆ ಒಂದೇ ಒಂದು ಪ್ರಶಸ್ತಿಯೂ ಇಲ್ಲ: ಎಲ್ಲಾ ದರ್ಶನ್ ಮಹಿಮೆ

Krishnaveni K
ಸೋಮವಾರ, 5 ಆಗಸ್ಟ್ 2024 (14:02 IST)
ಬೆಂಗಳೂರು: 69 ನೇ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಈ ಬಾರಿ ನಟ ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾ ಒಟ್ಟು ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಆದರೆ ಒಂದೇ ಒಂದು ಪ್ರಶಸ್ತಿಯೂ ಬಂದಿಲ್ಲ.

ಕಾಟೇರ ಸಿನಿಮಾ ಸ್ಯಾಂಡಲ್ ವುಡ್ ನ ಈ ಸಾಲಿನ ಸೂಪರ್ ಹಿಟ್ ಸಿನಿಮಾ. ಈ ಬಾರಿ ಫಿಲಂ ಫೇರ್ ಅವಾರ್ಡ್ ನಲ್ಲಿ ಅತ್ಯುತ್ತಮ ಚಿತ್ರ, ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶನ ಹೀಗೆ ಆರು ವಿಭಾಗಗಳಲ್ಲಿ ಕಾಟೇರ ಸಿನಿಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಆದರೆ ಆಗಸ್ಟ್ 3 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಕಾಟೇರ ಸಿನಿಮಾಗೆ ಒಂದೇ ಒಂದು ಪ್ರಶಸ್ತಿ ಬಂದಿಲ್ಲ.

ಇದನ್ನು ನೋಡಿದರೆ ಕಾಟೇರ ಸಿನಿಮಾವನ್ನು ಬೇಕೆಂದೇ ಪ್ರಶಸ್ತಿಯಿಂದ ಹೊರಗಿಡಲಾಯಿತಾ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಈಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿಯೇ ತಪ್ಪು ಸಂದೇಶ ನೀಡುವುದು ಬೇಡವೆಂದು ಅವರ ಸಿನಿಮಾವನ್ನು ಪ್ರಶಸ್ತಿ ರೇಸ್ ನಿಂದ ಹೊರಗಿಡಲಾಯಿತಾ ಎಂಬ ಅನುಮಾನ ಮೂಡಿದೆ.

ಇದರ ನಡುವೆ ದರ್ಶನ್ ಅಭಿಮಾನಿಗಳು ಫಿಲಂ ಫೇರ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಈ ಹಿಂದೆ ಸ್ವತಃ ದರ್ಶನ್ ಪ್ರಶಸ್ತಿಗಳು ದುಡ್ಡ ಕೊಟ್ಟರೆ ಬರುತ್ತವೆ ಎಂದಿದ್ದ ಹೇಳಿಕೆಯನ್ನೇ ವೈರಲ್ ಮಾಡಿ ಆಕ್ರೋಶ ತೀರಿಸಿಕೊಂಡಿದ್ದಾರೆ. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿ ಪಾಲಾದರೆ ಅತ್ಯುತ್ತಮ ಸಿನಿಮಾ ಡೇರ್ ಡೆವಿಲ್ ಮುಸ್ತಫಾ ಪಾಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments