ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ರೈಡರ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಸಕ್ಕರೆ ನಾಡು ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಡಿಸೆಂಬರ್ 24 ರಿಂದ ಚಿತ್ರ ತೆರೆಗೆ ಬರುತ್ತಿದ್ದು, ಅದಕ್ಕೂ ಮೊದಲು ನಿಖಿಲ್ ರಾಜಕೀಯ ಕ್ಷೇತ್ರವಾಗಿರುವ ಮಂಡ್ಯದಲ್ಲಿಯೇ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲು ಚಿತ್ರತಂಡ ತೀರ್ಮಾನಿಸಿದೆ. ಸದ್ಯದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ.
ರೈಡರ್ ಸಿನಿಮಾ ಪ್ರೇಮಕತೆ ಹೊಂದಿದ್ದು, ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ಬಿಡುಗಡೆಯಾಗುತ್ತಿರುವ ನಿಖಿಲ್ ಸಿನಿಮಾ ಇದಾಗಿದೆ. ಹೀಗಾಗಿ ತಮ್ಮ ಸ್ವಕ್ಷೇತ್ರದಲ್ಲೇ ಜನರ ಬೆಂಬಲ ಕೋರಲಿದ್ದಾರೆ.