Publish Date: Wed, 08 Dec 2021 (12:30 IST)
Updated Date: Wed, 08 Dec 2021 (09:11 IST)
ಬೆಂಗಳೂರು: ಡಿಸೆಂಬರ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿಕೊಂಡು ಥಿಯೇಟರ್ ಗೆ ಬರಲು ಕಾಯುತ್ತಿದೆ. ಅದರಲ್ಲೂ ವಿಶೇಷವಾಗಿ ಡಿಸೆಂಬರ್ 31 ಕ್ಕೆ ಹಲವು ಸಿನಿಮಾಗಳು ರಿಲೀಸ್ ಆಗಲಿವೆ.
ಹೇಳಿ ಕೇಳಿ ಕ್ರಿಸ್ ಮಸ್-ಹೊಸ ವರ್ಷಾಚರಣೆ ಜೊತೆಗೆ ವೀಕೆಂಡ್ ಕೂಡಾ ಬರುತ್ತಿರುವುದರಿಂದ ಹೆಚ್ಚಿನ ಸಿನಿಮಾಗಳು ಇದೇ ದಿನವನ್ನು ರಿಲೀಸ್ ಗೆ ಆಯ್ಕೆ ಮಾಡಿಕೊಂಡಿವೆ.
ಲವ್ ಯೂ ರಚ್ಚು, ಹುಟ್ಟುಹಬ್ಬದ ಶುಭಾಶಯಗಳು, ಅರ್ಜುನ್ ಗೌಡ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಬಿಗ್ ಸಿನಿಮಾಗಳು. ಇದಲ್ಲದೆ ಇನ್ನಷ್ಟು ಸಿನಿಮಾಗಳು ಇದೇ ದಿನದ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಸ್ಯಾಂಡಲ್ ವುಡ್ ಪಾಲಿಗೆ ಡಿಸೆಂಬರ್ 31 ಶುಭ ಮುಹೂರ್ತವಾಗಿದೆ.