ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ದಿನ ಆದ ತಾಂತ್ರಿಕ ಸಮಸ್ಯೆಯ ಫಜೀತಿ ಯಾರೂ ಮರೆತಿಲ್ಲ. ಆ ಗೊಂದಲ ಮರೆಯುವ ಮುನ್ನವೇ ಈಗ ಮತ್ತೊಂದು ವಿಘ್ನ ಎದುರಾಗಿತ್ತು.
ಇಂದು ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನಾಂಕವನ್ನು ಬೆಳಿಗ್ಗೆ 11.05 ಕ್ಕೆ ಪ್ರಕಟಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಎಲ್ಲರೂ ಕಾಯುತ್ತಲೇ ಇದ್ದರು.
ಆದರೆ ಮತ್ತೆ ತಾಂತ್ರಿಕ ಸಮಸ್ಯೆ ಎದುರಾಯ್ತು. ಇದರಿಂದಾಗಿ ನಿಗದಿತ ಸಮಯಕ್ಕೆ ರಿಲೀಸ್ ಡೇಟ್ ಬಹಿರಂಗವಾಗಲಿಲ್ಲ. ಬದಲಾಗಿ ಎರಡು ಗಂಟೆ ತಡವಾಗಿ ರಿಲೀಸ್ ಡೇಟ್ ಘೋಷಣೆಯಾಯಿತು. ಈ ಸಮಸ್ಯೆ ಇಲ್ಲಿಗೇ ಮುಗಿಯಲಿ ಎಂಬುದೇ ಕಿಚ್ಚನ ಅಭಿಮಾನಿಗಳ ಆಶಯ.