ಬೆಂಗಳೂರು: ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದಲ್ಲಿ ಅಧೀರನ ಪಾತ್ರ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿದ್ದಾರೆ.
ಸಂಜಯ್ ದತ್ ಜೊತೆಗೆ ಡಬ್ಬಿಂಗ್ ಸೆಷನ್ ನಲ್ಲಿರುವ ಫೋಟೋ ಪ್ರಕಟಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಅಧೀರ ಈಸ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಡಬ್ಬಿಂಗ್ ಮುಗಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ಮುಂದಿನ ವರ್ಷ ಏಪ್ರಿಲ್ 14 ರಂದು ತೆರೆ ಕಾಣಲಿರುವ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಪ್ರಕಾಶ್ ರಾಜ್, ರವೀನಾ ಟಂಡನ್, ಸಂಜಯ್ ದತ್ ಸೇರಿದಂತೆ ಘಟಾನುಘಟಿಗಳ ದಂಡೇ ಇದೆ.