Select Your Language

Notifications

webdunia
webdunia
webdunia
webdunia

ನೈಜೀರಿಯಾ ಮೂಲದ ನಟ ಸ್ಯಾಮುಯೆಲ್ ರಾಬಿನ್ಸನ್ ಮಲಯಾಳಂ ಚಿತ್ರದ ನಿರ್ಮಾಪಕರ ಮೇಲೆ ಆರೋಪ ಮಾಡಿದ್ದಾದರೂ ಯಾಕೆ…?

ನೈಜೀರಿಯಾ ಮೂಲದ ನಟ ಸ್ಯಾಮುಯೆಲ್ ರಾಬಿನ್ಸನ್ ಮಲಯಾಳಂ ಚಿತ್ರದ ನಿರ್ಮಾಪಕರ ಮೇಲೆ ಆರೋಪ ಮಾಡಿದ್ದಾದರೂ ಯಾಕೆ…?
ನೈಜೀರಿಯಾ , ಮಂಗಳವಾರ, 3 ಏಪ್ರಿಲ್ 2018 (07:09 IST)
ನೈಜೀರಿಯಾ :  'ಸುಡಾನಿ ಫ್ರಂ ನೈಜೀರಿಯಾ' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ ನೈಜೀರಿಯಾ ಮೂಲದ ನಟನೊಬ್ಬ ಚಿತ್ರದ ನಿರ್ಮಾಪಕರು ತನ್ನ ಬಗ್ಗೆ ವರ್ಣಬೇಧ ನೀತಿ ಅನುಸರಿಸಿದ್ದಾರೆ ಎಂದು ನಿರ್ಮಾಪಕರ   ವಿರುದ್ದ ಆರೊಪ ಮಾಡಿದ್ದಾನೆ.


'ಸುಡಾನಿ ಫ್ರಂ ನೈಜೀರಿಯಾ' ಮಲಯಾಳಂ ಚಿತ್ರಕ್ಕೆ ನೈಜೀರಿಯಾ ಮೂಲದ ನಟ ಸ್ಯಾಮುಯೆಲ್ ರಾಬಿನ್ಸನ್ ಆಯ್ಕೆ ಮಾಡಿದ ನಿರ್ಮಾಪಕರು ಆತ ಕಪ್ಪು ವರ್ಣಿಯನೆಂಬ ಕಾರಣಕ್ಕೆ ಇತರರಿಗಿಂತ ಕಡಿಮೆ ಸಂಬಳ ನೀಡಿರುವುದಾಗಿ ಸ್ವತಃ ನಟ ಸ್ಯಾಮುಯೆಲ್ ರಾಬಿನ್ಸನ್  ಫೇಸ್ ಬುಕ್ ನಲ್ಲಿ ತನ್ನ ನೋವುವನ್ನು ವ್ಯಕ್ತಪಡಿಸಿದ್ದಾನೆ. ನಿರ್ಮಾಪಕರು ಈ ಚಿತ್ರದ ಅಭಿನಯಕ್ಕೆ ತನಗೆ  ಕೇವಲ 1.80 ಲಕ್ಷ ರೂ. ನೀಡಿದ್ದು, ಚಿತ್ರ ಯಶಸ್ವಿಯಾದರೆ ಇನ್ನಷ್ಟು ಹಣ ನೀಡುವುದಾಗಿ ಹೇಳಿದ್ದರೂ ಕೂಡ  ನಿರ್ಮಾಪಕರು ಈವರೆಗೂ ಒಂದು ಕರೆಯನ್ನೂ ಮಾಡಿಲ್ಲವೆಂದು ತಿಳಿಸಿದ್ದಾನೆ.


ಶೂಟಿಂಗ್ ಸಂದರ್ಭದಲ್ಲೂ ಊಟ-ವಸತಿ ವಿಚಾರದಲ್ಲಿ ತಾರತಮ್ಯ ಮಾಡಲಾಗಿತ್ತು ಎಂದು ಸ್ಯಾಮುಯೆಲ್ ಆರೋಪಿಸಿದ್ದರು. ಆದರೆ ಚಿತ್ರತಂಡ  ಮಾತ್ರ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಒಪ್ಪಂದದಂತೆ ಸ್ಯಾಮುಯೆಲ್ ಗೆ ಹಣ ನೀಡಿರುವುದಾಗಿ ಸ್ಪಷ್ಟನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರಿಯಾಂಕಾ ಚೋಪ್ರಾ ಕ್ವಾಂಟಿಕೋ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದು ಯಾಕೆ..?