ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ. ಆದರೆ, ಕೊರೊನಾ ಕಾರಣದಿಂದ ಉಪ್ಪಿ ಈ ಬಾರಿಯೂ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ದೂರದಿಂದಲೇ ಹಾರೈಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದರ ನಡುವೆಯೇ ಅಭಿಮಾನಿಗಳಿಗೆ ಖುಷಿಯ ಸುದ್ದಿಯೂ ಸಿಕ್ಕಿದೆ. ಇಂದು ರಿಯಲ್ ನಡಿ ಸಿನಿಮಾ ಮಾಡಲಿದ್ದಾರೆಂಬ ಲೆಕ್ಕಾಚಾರ ಶುರುವಾಗಿದೆ.
ಅದು ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿರುವುದು ಹಾಗೂ ಆ ಸಿನಿಮಾದ ಟೈಟಲ್ ಹೊರಬಿದ್ದಿರೋದು. ಈ ಬಾರಿಯೂ ಚಿಹ್ನೆಯನ್ನಿಟ್ಟುಕೊಂಡು ಉಪೇಂದ್ರ ಸಿನಿಮಾ ಮಾಡಲು ಹೊರಟಿದ್ದಾರೆ. ಇಂಗ್ಲೀಷ್ನ “ಐ ಹಾಗೂ “ಯು ಮೂಲಕ ನಾನು-ನೀನು ಕಾನ್ಸೆಪ್ಟ್
ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆಯ “ಬಾಕ್ಸರ್ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ “ಹೋಮ್ ಮಿನಿಸ್ಟರ್ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆನ್ಸಾರ್ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಹೋಮ್ ಮಿನಿಸ್ಟರ್ ಥಿಯೇಟರ್ಗಳು ತೆರೆಯುತ್ತಿದ್ದಂತೆ, ಬಿಡುಗಡೆಯಾಗಲಿದೆ.
ಇನ್ನು ಉಪೇಂದ್ರ ಅಭಿನಯದ “ಕಬ್ಜ ಚಿತ್ರ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಕಿಯಿರುವ ಚಿತ್ರೀಕರಣ ಸೆಪ್ಟೆಂಬರ್ನಿಂದ ಶುರುವಾಗಲಿದೆ. ಇದರೊಂದಿಗೆ ರವಿಚಂದ್ರನ್ ಅವರೊಂದಿಗೆ ನಟಿಸುತ್ತಿರುವ ಸಿನಿಮಾವೂ ಸಿದ್ಧವಾಗಿದೆ. ಇದಲ್ಲದೇ ಮಾದೇಶ ಜೊತೆ “ಲಗಾಮ್ ನಡೆಯುತ್ತಿದೆ. ಇನ್ನು ಶಶಾಂಕ್ ಚಿತ್ರಗಳಿಗೂ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
“ಕಬ್ಜ ಮೇಲೆ ನಿರೀಕ್ಷೆ: ಉಪೇಂದ್ರ ಅವರ ಪಟ್ಟಿಯಲ್ಲಿರುವ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು “ಕಬ್ಜ. ಅದಕ್ಕೆ ಕಾರಣ ಪ್ಯಾನ್ ಇಂಡಿಯಾ. ಹೌದು, ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಕಬರಿ ಚಿತ್ರ ಈಗಾಗಲೇ ಕೆಲವು ದಿನಗಳ ಚಿತ್ರೀಕರಣ ಪೂರೈಸಿದೆ. ಚಿತ್ರದ ಫೋಟೋಶೂಟ್ ಹಾಗೂ ಝಲಕ್ ನೋಡಿದವರು ಸಿನಿಮಾ ಬಗ್ಗೆ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ “ಕಬ್ಜ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೆಂಟಿಮೆಂಟ್, ಲವ್ ಸ್ಟೋರಿ ಚಿತ್ರಗಳ ಮೂಲಕ ಗಮನ ಸೆಳೆದಿರುವ ಚಂದ್ರು, ಈ ಬಾರಿ ಔಟ್ ಅಂಡ್ ಔಟ್ ಆಯಕ್ಷನ್ ಸಿನಿಮಾ ಮಾಡಲು ಹೊರಟಿದ್ದಾರೆ.
ಇನ್ನು ಉಪ್ಪಿ ಬರ್ತ್ಡೇ ಪ್ರಯುಕ್ತ “ಕಬ್ಜ ಚಿತ್ರದ ಕಾನ್ಸೆಪ್ಟ್ ಮೋಶನ್ ಪೋಸ್ಟರ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿ ಬರಲಿದೆ. ಬಹುತೇಕ ಸಿನಿಮಾ ಸೆಟ್ನಲ್ಲೇ ನಡೆಯುತ್ತದೆ. ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ ಆರ್.ಚಂದ್ರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್ ಇಂಡಿಯಾದತ್ತ ಮುಖ ಮಾಡಿದ್ದಾರೆ. ಆರ್. ಚಂದ್ರು, ನಿರ್ಮಿಸಿ, ನಿರ್ದೇಶಿಸಿದ “ಐ ಲವ್ ಯು ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುವ ಮೂಲಕ ಹಿಟ್ ಲಿಸ್ಟ್ ಸೇರಿತ್ತು. ಈಗ “ಕಬ್ಜ ಮೇಲೆ ನಿರೀಕ್ಷೆ ಇದ್ದು, ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಚಂದ್ರು ಅವರದ್ದೇ.
ನಲ್ಲಿ ಹೊಸ ಗೆಟಪ್: “ಲಗಾಮ್ ಮಾದೇಶ ನಿರ್ದೇಶನದ “ಲಗಾಮ್ ಚಿತ್ರದಲ್ಲೂ ಉಪ್ಪಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮ್ಯಾನರೀಸಂ, ಗೆಟಪ್ ಎಲ್ಲವೂ ವಿಭಿನ್ನವಾಗಿದೆಯಂತೆ. ಈ ಬಗ್ಗೆ ಮಾತನಾಡುವ ಉಪೇಂದ್ರ, “ಇತ್ತೀಚಿನ ವರ್ಷಗಳಲ್ಲಿ ನಾನು ಮಾಡಿದ ಸಿನಿಮಾಗಳಿಗಿಂತ ತುಂಬ ವಿಭಿನ್ನವಾದ ಸಿನಿಮಾ ಇದು. ನಮ್ಮ ನಡುವೆಯೇ ನಡೆಯುವ ಕೆಲವೊಂದು ಅಂಶಗಳು ಈ ಸಿನಿಮಾದಲ್ಲಿದೆ. ಹಾಗಂತ ಇಲ್ಲಿ ರಾಜಕೀಯ ಇಲ್ಲ. ಸಿನಿ ಮಾದ ಕಥೆ ತುಂಬ ಚೆನ್ನಾಗಿದೆ. ಆಡಿಯನ್ಸ್ಗೂ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಎಂಟರ್ಟೈನ್ಮೆಂಟ್ಗೆ ಬೇಕಾದ ಎಲ್ಲ ಅಂಶಗಳನ್ನೂ “ಲಗಾಮ್ ನಲ್ಲಿ ನೋಡಬಹುದು. ಆದಷ್ಟು ಬೇಗ ಸಿನಿಮಾ ಮುಗಿಸಿ ಥಿಯೇಟರ್ಗೆ ಬರೋದಕ್ಕೆ ನಾವು ಕಾತುರರಾಗಿದ್ದೇವೆ. ಈ ಸಿನಿಮಾವನ್ನು ಬಹಳ ದೊಡ್ಡದಾಗಿ ಮಾಡುತ್ತಿದ್ದಾರೆ. ವಿಡಂಬನೆ, ಭ್ರಷ್ಟಾಚಾರ ಸೇರಿದಂತೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅದರ ಬಗ್ಗೆ ನಾನು ಹೆಚ್ಚಿಗೆ ಹೇಳಲಾಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೋ ಅದೇ ಫೈನಲ್. ಸಿನಿಮಾ ದಲ್ಲಿಯೇ ಎಲ್ಲವನ್ನೂ ನೋಡಬೇಕು ಎಂಬುದು ನನ್ನಾಸೆ. ಒಂದಷ್ಟು ಸಾಮಾಜಿಕ ವಿಡಂಬನೆ ಈ ಸಿನಿಮಾದಲ್ಲೂ ಇರುತ್ತದೆ ಎನ್ನುತ್ತಾರೆ.
ಈ ನಡುವೆಯೇ”ಬುದ್ಧಿವಂತ-2′ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಜಯರಾಮ್ ನಿರ್ದೇಶನ ಮಾಡುತ್ತಿದ್ದಾರೆ.
“ಯಮರಾಜನಾದ ಉಪೇಂದ್ರ: ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಎರಡು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಅದರಲ್ಲೊಂದು “ಯಮರಾಜ. ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಆರ್.ಕೇಶವ್ ಈ ಚಿತ್ರದ ನಿರ್ಮಾಪಕರು. ಕೆ.ಮಂಜು ಅವರ ಸಹಕಾರ ಈ ಚಿತ್ರಕ್ಕಿದೆ.