Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಭೈರವ ಲುಕ್ ನೋಡಿ ಅಭಿಮಾನಿಗಳಿಗೆ ಅಣ್ಣಾವ್ರದ್ದೇ ನೆನಪು

Shiva Rajkumar Bhairavana kone pata movie

Krishnaveni K

ಬೆಂಗಳೂರು , ಮಂಗಳವಾರ, 9 ಜುಲೈ 2024 (12:35 IST)
Photo Credit: Facebook
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮುಂಬರುವ ಸಿನಿಮಾ ಭೈರವನ ಕೊನೆ ಪಾಠ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದಾರೆ.

ಶಿವರಾಜ್ ಕುಮಾರ್ ಈ ಫಸ್ಟ್ ಲುಕ್ ನಲ್ಲಿ ಪಕ್ಕಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಅವರೇನಾ ಎಂಬಷ್ಟು ಬದಲಾಗಿದ್ದಾರೆ. ಫಸ್ಟ್ ಲುಕ್ ನೋಡಿದರೇ ಇದೊಂದು ವಿಭಿನ್ನ ಸಿನಿಮಾ ಎಂದು ಥಟ್ಟನೇ ಹೇಳಬಹುದು. ಶಿವಣ್ಣ ವೃತ್ತಿ ಜೀವನದಲ್ಲಿ ಇದು ಮತ್ತೊಂದು ಮೈಲಿಗಲ್ಲಿನ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು.

ಈ ಸಿನಿಮಾದ ಫಸ್ಟ್ ಲುಕ್ ನೋಡಿದ ಅಭಿಮಾನಿಗಳಿಗೆ ಈಗ ಅಣ್ಣಾವ್ರ ನೆನಪು ಕಾಡಿದೆ. ಬಿಳಿಯ ದಾಡಿ, ರಫ್ ಆಗಿರುವ ಮುಖ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಥೇಟ್ ಅಣ್ಣಾವ್ರ ಥರಾನೇ ಕಾಣ್ತಿದ್ದೀರಿ ಅಣ್ಣಾ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಈ ಮೊದಲು ಹಲವು ವಿಭಿನ್ನ ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಆದರೆ ಈ ಸಿನಿಮಾದ ಫಸ್ಟ್ ಲುಕ್, ಟೈಟಲ್ ಎಲ್ಲವೂ ವಿಭಿನ್ನವಾಗಿದೆ. ವಿಭಿನ್ನ ಕತೆಗಳನ್ನು ಪ್ರೇಕ್ಷಕರ ಮುಂದಿಡುವ ಹೇಮಂತ್ ರಾವ್ ನಿರ್ದೇಶನದ ಸಿನಿಮಾವಿದು. ಹೀಗಾಗಿ ಸಹವಾಗಿಯೇ ಅಭಿಮಾನಿಗಳಲ್ಲಿ ಕುತೂಹಲವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲು ಸೇರಿದರೂ ದರ್ಶನ್ ಗೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ