Publish Date: Mon, 04 Apr 2022 (10:50 IST)
Updated Date: Mon, 04 Apr 2022 (11:17 IST)
ಚೆನ್ನೈ: ವಿಜಯ್ ನಾಯಕರಾಗಿರುವ ಏಪ್ರಿಲ್ 13 ರಂದು ರಿಲೀಸ್ ಆಗುತ್ತಿರುವ ಬೀಸ್ಟ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ವೀಕ್ಷಿಸಿದ ಅಭಿಮಾನಿಗಳು ಅನುಮಾನವೊಂದನ್ನು ಹೊರಹಾಕಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವೈವಿದ್ಯಮಯ ಪಾತ್ರ ಮಾಡುತ್ತಾ ಬಂದಿರುವ ವಿಜಯ್ ಗೆ ಇದೂ ಒಂದು ವಿಭಿನ್ನ ಸಿನಿಮಾ.
ಆದರೆ ಈ ಸಿನಿಮಾ ಟ್ರೈಲರ್ ನೋಡಿದ ಜನ ಇದು ಹಾಲಿವುಡ್ ಸಿನಿಮಾವೊಂದರ ಕತೆ ಎನ್ನುತ್ತಿದ್ದಾರೆ. ಆದರೆ ಚಿತ್ರತಂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.