ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಕಳೆದ ಆರು ತಿಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪವಿತ್ರಾ ಗೌಡ ಇಂದು ರಿಲೀಸ್ ಆದರು. ಆದರೆ ಅವರ ರಿಲೀಸ್ ಆದಾಗ ಅವರ ಮುಖಭಾವ ನೋಡಿ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.
ರೆಗ್ಯುಲರ್ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಇಂದು ಪವಿತ್ರಾ ಜೈಲಿನಿಂದ ಹೊರಬಂದರು. ಅವರು ಹೊರಬರುತ್ತಿದ್ದಂತೇ ಕ್ಯಾಮರಾಗಳು ಅವರನ್ನು ಹಿಂಬಾಲಿಸಿದ್ದವು. ಪವಿತ್ರಾ ನಗುಮೊಗದಿಂದ ಹೊರಬರುತ್ತಿರುವ ವಿಡಿಯೋಗಳು ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ನೋಡ್ತಿದ್ದರೆ ಅವರು ಆರು ತಿಂಗಳಿನಿಂದ ಜೈಲಿನಲ್ಲಿದ್ದರೋ ಇಲ್ಲಾ ಯಾರದ್ದೋ ನೆಂಟರ ಮನೆಯಲ್ಲಿದ್ದರೋ ಎಂಬ ಅನುಮಾನ ಬರುವಂತಿದೆ. ಆರು ತಿಂಗಳ ಜೈಲಿನಲ್ಲಿದ್ದು ಬಂದರೂ ಅವರ ಮುಖಭಾವದಲ್ಲಿ ಕೊಂಚವೂ ಬದಲಾವಣೆಯಾಗಿರಲಿಲ್ಲ.
ಇದನ್ನು ನೋಡಿ ಕೆಲವರು ಅವರಿಗೆ ಜೈಲಿನಲ್ಲೂ ಮೇಕಪ್ ಕಿಟ್ ಕೊಡ್ತಿದ್ರಾ? ಮುಖದ ಗ್ಲಾಮರ್ ಕೊಂಚವೂ ಕಮ್ಮಿಯಾಗಿಲ್ಲ. ಮೇಕಪ್ ಮಾಡಿಕೊಂಡೇ ಬಂದಂತಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಕಾಮೆಂಟ್ ಮಾಡಿದ್ದಾರೆ. ಇಂದು ರಿಲೀಸ್ ಆದ ಬಳಿಕ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಪವಿತ್ರಾ ಬಳಿಕ ತಮ್ಮ ಮನೆಗೆ ತೆರಳಿದರು.