Publish Date: Fri, 01 Oct 2021 (17:45 IST)
Updated Date: Fri, 01 Oct 2021 (17:47 IST)
ಬೆಂಗಳೂರು: ನಟ ನೀನಾಸಂ ಸತೀಶ್ ತಾಯಿ ಚಿಕ್ಕ ತಾಯಮ್ಮ ವಯೋಸಹಜ ಖಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.
ಇಂದು ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಚಿಕ್ಕ ತಾಯಮ್ಮ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೃತರ ಅಂತಿಮ ಸಂಸ್ಕಾರ ಅವರ ಮದ್ದೂರಿನಲ್ಲಿ ನಡೆಯಲಿದೆ. ಸತೀಶ್ ತಾಯಿ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.