Select Your Language

Notifications

webdunia
webdunia
webdunia
webdunia

ಕರಾಟೆ ಕಿಂಗ್ ಶಂಕರ್ ನಾಗ್ ನೆನೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕರಾಟೆ ಕಿಂಗ್ ಶಂಕರ್ ನಾಗ್ ನೆನೆದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (17:32 IST)
ಬೆಂಗಳೂರು: ಕರಾಟೆ ಕಿಂಗ್ ಶಂಕರ್ ನಾಗ್ ಅವರ ಪುಣ್ಯತಿಥಿಯಾದ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಮರಣೆ ಮಾಡಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.


1990 ರ ಸೆಪ್ಟೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಧಾರುಣವಾಗಿ ಸಾವನ್ನಪ್ಪಿದ್ದರು. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ, ನಟನ ಸಾವು ಇಂದಿಗೂ ಚಿತ್ರರಂಗವನ್ನು ಕಾಡುತ್ತಲೇ ಇದೆ.

ಇಂದು ಆ ದುರ್ಘಟನೆಯಾಗಿ 31 ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದರ್ಶನ್ ‘ಕರಾಟೆ ಕಿಂಗ್ ಶಂಕರ್ ನಾಗ್ ನಮ್ಮನ್ನು ಅಗಲಿ 31 ವರ್ಷ ಕಳೆದಿದೆ. ಆದರೆ ಕನ್ನಡಿಗರ ಮನದಲ್ಲಿ ಅವರು ಎಂದೆಂದಿಗೂ ಅಜರಾಮರ’ ಎಂದು ಸ್ಮರಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿಗೆ ಒಂದು ದಿನ ಮುಂಚೆ ಮೂರು ಪೋಸ್ಟ್: ಸೌಜನ್ಯ ಸಾವಿನ ಹಿಂದೆ ಅನುಮಾನ