Publish Date: Sun, 16 Oct 2022 (17:04 IST)
Updated Date: Sun, 16 Oct 2022 (17:05 IST)
ಚೆನ್ನೈ: ಬಾಡಿಗೆ ತಾಯ್ತನ ವಿವಾದದ ನಡುವೆ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ‍್ನೇಶ್ ಶಿವನ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರಗೆ ಬಂದಿದೆ.
ಇದೇ ಜೂನ್ ನಲ್ಲಿ ನಯನತಾರಾ-ವಿಘ‍್ನೇಶ್ ಅದ್ಧೂರಿಯಾಗಿ ಮದುವೆಯಾಗಿದ್ದರು. ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಈ ವಿಚಾರವಾಗಿ ಎಲ್ಲವೂ ಕಾನೂನಾತ್ಮಕವಾಗಿಯೇ ನಡೆದಿದೆಯೇ ಎಂದು ತಮಿಳುನಾಡು ಸರ್ಕಾರ ವಿಚಾರಣೆಗೆ ಆದೇಶಿಸಿತ್ತು.
ಅದರ ಬೆನ್ನಲ್ಲೇ ದಂಪತಿ ತಮ್ಮ ಮದುವೆ ಶಾಸ್ತ್ರಗಳು ಇತ್ತೀಚೆಗೆ ನಡೆದಿದ್ದರೂ ಆರು ವರ್ಷಗಳ ಹಿಂದೆಯೇ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಾಡಿಗೆ ತಾಯ್ತನ ಮಾಡಿದ ಮಹಿಳೆ ತಮ್ಮ ಸಂಬಂಧಿಕರೇ ಎಂದು ದಂಪತಿ ಮಾಹಿತಿ ನೀಡಿದ್ದಾರಂತೆ. ಹೀಗಾಗಿ ನಯನ್-ವಿಘ್ನೇಶನ್ ಸಂಕಷ್ಟದಿಂದ ಪಾರಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.
-Edited by Rajesh Patil