Publish Date: Wed, 10 Aug 2022 (08:50 IST)
Updated Date: Wed, 10 Aug 2022 (09:05 IST)
ಹೈದರಾಬಾದ್: ವಿಘ್ನೇಶ್ ಶಿವನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಬಹುಭಾಷಾ ನಟಿ ನಯನತಾರಾ ಸಂಭಾವನೆಯಲ್ಲಿ ದಿಡೀರ್ ಏರಿಕೆಯಾಗಿದೆಯಂತೆ! ಹೀಗೊಂದು ಸುದ್ದಿ ಹರಿದಾಡುತ್ತಿದೆ.
ಮದುವೆಯಾದ ಮೇಲೆ ತೀರಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲ್ಲ ಎಂದು ನಯನತಾರಾ ಷರತ್ತು ಹಾಕುತ್ತಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಅವರು ಸಂಭಾವನೆ ಏರಿಕೆ ಮಾಡಿರುವ ಸುದ್ದಿ ಕೇಳಿಬರುತ್ತಿದೆ.
ದಕ್ಷಿಣ ಭಾರತದ ದುಬಾರಿ ನಟಿಯರಲ್ಲಿ ನಯನತಾರಾ ಮುಂಚೂಣಿಯಲ್ಲಿದ್ದಾರೆ. ನಯನತಾರಾ ಚಿಕ್ಕ ಪುಟ್ಟ ಪಾತ್ರಕ್ಕೂ 4 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಇದೀಗ ಒಂದು ಸಿನಿಮಾ ಸಂಭಾವನೆ ಏರಿಕೆ ಮಾಡಿರುವ ನಯನತಾರಾ 10 ಕೋಟಿ ರೂ. ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹಾಗಿದ್ದರೂ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.